ಸಿದ್ಧಾರ್ಥ ಅವರ ಅಗಲಿಕೆಗೆ ಕಂಬನಿ ಮಿಡಿದ ಪುನೀತ್ ರಾಜಕುಮಾರ್…

ಕರ್ನಾಟಕದ ಹೆಮ್ಮೆಯ ಸುಪುತ್ರ ಕಾಫಿ ಗಂಧವನ್ನ ಇಡೀ ವಿಶ್ವಕ್ಕೆ ಪಸರಿಸಿದ ಸಾವಿರಾರು ಜನರಿಗೆ ಉದ್ಯೋಗ ನೀಡಿದ ಅನ್ನದಾತ ಸಿದ್ದಾರ್ಥ್ ಅವರ ದಾರುಣ ಅಂತ್ಯ ಇಡೀ ಕರುನಾಡಿನ ಜನತೆಯನ್ನ ಬೆಚ್ಚಿ ಬೀಳಿಸಿದೆ.. ಕಳೆದ ಒಂದು ದಿನದಿಂದ ಅವರ ವಾಪಸ್ ಸೇಫ್ ಆಗಿ ಬರಲಿ ಎಂದು ಬೇಡಿಕೊಂಡವರ ನಂಬಿಕೆ ಸುಳ್ಳಾಗಿದ್ದು, ನೇತ್ರಾವತಿಯ ನದಿಯ ಸೇತುವೆ ಮೇಲೆ ಮೊನ್ನೆ ಸಂಜೆ ಆರು ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದ ವಿಜಿ ಸಿದ್ದಾರ್ಥ್ರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ.. ಸುಮಾರು 36 ಗಂಟೆಗಳ ಕಾರ್ಯಾಚರಣೆಯ ಬಳಿಕ ಹೊಯ್ಗೆಬಜಾರ್ಎಂಬಲ್ಲಿ ಸಿದ್ದಾರ್ಥ್ರ ಮೃತದೇಹ ಪತ್ತೆಯಾಗಿದೆ. ಬೋಟ್ಗಳಲ್ಲಿ ಹುಡುಕಾಟ ನಡೆಸ್ತಿದ್ದ ತಂಡಕ್ಕೆ ಮೃತದೇಹ ಪತ್ತೆಯಾಗಿದೆ.

ಚೇತನಹಳ್ಳಿಯಲ್ಲಿ ಸಿದ್ದಾರ್ಥ್ ಅವರ ಅಂತಿಮ ವಿಧಿವಿಧಾನಗಳನ್ನು ನಡೆಸಲು ಉದ್ದೇಶಿಸಲಾಗಿದೆ.. ಗಣ್ಯರು ಸೇರಿದಂತೆ ಸಿನಿಮಾ ತಾರೆಯರು ಸಿದ್ದಾರ್ಥ್ ಅವರ ಅಗಲಿಕೆಗೆ ಸಂತಾಪ ಸೂಚಿಸಿದ್ದು, ನಟ ಪುನೀತ್ ರಾಜ್ ಕುಮಾರ್ ಅವರು ಕೂಡ ಅಗಲಿದ ಸಹೃದಯಿ ಉದ್ಯಮಿಗೆ ಸಂತಾಪ ಸೂಚಿಸಿದ್ದಾರೆ..  ಡೈನಮಿಕ್ಉದ್ಯಮಿ, ಒಂದು ಕಾಫಿ ಹೇಗೆ ಸಾವಿರಾರು ಮಂದಿಗೆ ಉದ್ಯೋಗವನ್ನು ಸೃಷ್ಟಿಸಬಹುದು ಎಂದು ತೋರಿಸಿಕೊಟ್ಟವರು ಸಿದ್ಧಾರ್ಥ್​. ಅವರು ಮಾಡಿರುವ ಕೆಲಸಗಳು ಸದಾ ಹಸಿರಾಗಿ ಮನಸಿಲ್ಲಿ ಉಳಿಯುತ್ತದೆಎಂದಿದ್ದಾರೆ..

Comments

comments

Similar Articles

Top