ವಿದ್ಯೆ ಕಲಿಸಿಕೊಟ್ಟ ಗುರುವಿಗೆ ಕೋಟ್ಯಾಧಿಪತಿಯಲ್ಲಿ ಧನ್ಯವಾದ ಹೇಳಿದ ಅಪ್ಪು..

ಪವರ್ ಸ್ಟಾರ್ ಆಗುವುದಕ್ಕು ಮೊದಲೇ ಪುನೀತ್ ರಾಜ್ ಕುಮಾರ್ ಕನ್ನಡಿಗರಿಗೆ ಬಾಲನಟನಾಗಿ ಚಿರಪರಿಚಿತ.. ಚಿಕ್ಕವಯಸ್ಸಿಗೆ ರಾಷ್ಟ್ರ ಪ್ರಶಸ್ತಿ ಪಡೆದ ಡಾ.ರಾಜ್ ಕುಮಾರ್ ಅವರ ಪುತ್ರನಿಗೆ ನಟನೆ ರಕ್ತದಲ್ಲಿಯೇ ಇತ್ತು ಅನ್ನೋದು ನಿಮಗು ಗೊತ್ತಿದೆ.. ಆದರೆ ಕ್ಯಾಮರಾ ಮುಂದೆ ನಿಂತು ಅಭಿನಯಿಸೋದು, ಹಾವಭಾವಗಳನ್ನು ವ್ಯಕ್ತ ಪಡಿಸೋದು ಕಲಿತಿದ್ದು ಹೇಗೆ..? ಇದಕ್ಕೆ ಆ ಸಂದರ್ಭದಲ್ಲಿ ಸಹಾಯ ಮಾಡಿದ್ದು ಯಾರು ಅನ್ನೋದರ ಬಗ್ಗೆ ಈ ಹಿಂದೆಯು ಅಪ್ಪು ಹೇಳಿದ್ದಾರೆ..

ಈ ಬಗ್ಗೆ ಮತ್ತೊಮ್ಮೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಪವರ್ ಸ್ಟಾರ್ ನನಗೆ ಚಿಕ್ಕವಯಸ್ಸಿನಲ್ಲಿ ಅಭಿನಯಿಸುವಾಗ ಹೀಗೆ ಮಾಡಬೇಕು ಎಂದು ಹೇಳಿಕೊಡುತ್ತಿದ್ದವರು ಹಿರಿಯ ನಟರಾದ ಹೊನವಳ್ಳಿ ಕೃಷ್ಣ ಅವರು ಎಂದಿದ್ದಾರೆ.. ಜೊತೆಗೆ ಧನ್ಯವಾದವನ್ನ ತಿಳಿಸಿದ್ದಾರೆ.. ಈ ನಟನೆಯ ಹಾದಿಯಲ್ಲಿ ಹಲವರು ನನಗೆ ಸಹಾಯ ಮಾಡಿದ್ದಾರೆ ಎಂದಿದ್ದಾರೆ

ಬಾಲ ನಟನಾಗಿದ್ದಾಗ ಅಷ್ಟೇನು ಭಯ ಇರಲಿಲ್ಲ.. ಮೊದಲ ಬಾರಿಗೆ ನಾಯಕನಾಗಿ ಕ್ಯಾಮರ ಮುಂದೆ ನಿಂತಾಗ ಭಯವಾಗಿತ್ತು.. ಆದರೆ ಈಗ ಕ್ಯಾಮರಾ ಆನ್ ಆಗುತ್ತಿದ್ದ ಹಾಗೆ ಜನ ನಮ್ಮನ್ನ ಪ್ರೀತಿಸೋದು, ನಮ್ಮನ್ನ ಜನ ನೋಡ್ತಿದ್ದಾರೆ ಅನ್ನೋದು ನೆನಪಿಗೆ ಬರುತ್ತೆ.. ಈಗಲೂ ಮೊದಲ ಸಿನಿಮಾದಲ್ಲಿ ಇದ್ದ ಭಯ ಹಾಗೆ ಇದೆ ಎಂದಿದ್ದಾರೆ ಅಪ್ಪು..

Comments

comments

Similar Articles

Top