ರೋಚಕ ತಿರುವಿನತ್ತ ಗಟ್ಟಿಮೇಳ. ಕೊನೆಗೂ‌ ಮಂಟಪಕ್ಕೆ ಬಂದೇ ಬಿಟ್ಟಳು ಗೌತಮ್ ಹೆಂಡ್ತಿ.ಮುಂದೇನಾಯ್ತು ಗೊತ್ತಾ..?

ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರಾರಂಭವಾಗಿ ಕೆಲವೇ ದಿನಗಳಾದರೂ ಸಾಕಷ್ಟು ಜನಪ್ರಿಯತೆ ಗಳಿಸಿದೆ. ಅಗ್ನಿಸಾಕ್ಷಿ ಧಾರಾವಾಹಿಗೆ ಭಾರಿ ಪೈಪೋಟಿ ನೀಡಿದ ಝೀ ಕನ್ನಡದ ಗಟ್ಟಿಮೇಳ ಧಾರಾವಾಹಿ ಈಗ ಎರಡು ಸ್ಥಾನದಲ್ಲಿದೆ. ಹೆಣ್ಣು ಮಕ್ಕಳ ಕಥೆಯನ್ನು ಹೊಂದಿರುವ ಗಟ್ಟಿಮೇಳ ಮಾಧ್ಯಮ ವರ್ಗದ ಕುಟುಂಬಕ್ಕೆ ಬಹಳ ಹತ್ತಿರವಾಗಿದೆ.

ಇನ್ನು ಈ ಧಾರಾವಾಹಿಯಲ್ಲಿ ಆರತಿ ಹಾಗೂ ವಿಕ್ಕಿ ಮದುವೆ ಮಾಡಿಸಲು ಅಮೂಲ್ಯ ಹಾಗೂ ವೇದಂತ್ ಸಾಕಷ್ಟು ಪ್ರಯತ್ನಗಳು ಮಾಡುತ್ತಿದ್ದಾರೆ. ಗೌತಮ್ ಕುತಂತ್ರದಿಂದ ಆರತಿ ಅವರನ್ನು ಮದುವೆಯಾಗಲು ಹೊರಟ್ಟಿರುವ ಗೌತಮ್ ತಡೆಯಲು, ವೇದಂತ್ ಹಲವಾರು ಮಾರ್ಗವನ್ನು ಹುಡುಕಿದರು ವಿಫಲವಾಗುತ್ತಿದೆ.

ಎರಡನೇ ಮದುವೆಯಾಗಲು ಹೊರಟ್ಟಿರುವ ಗೌತಮ್ ಹೆಂಡ್ತಿಯನ್ನು ಮದುವೆ ಮಂಟಪಕ್ಕೆ ಕರೆತರಲು ವೇದಂತ್ ಪ್ಲಾನ್. ಆದರೆ  ಗೌತಮ್ ಹೆಂಡ್ತಿ ಮಂಟಪಕ್ಕೆ ಬರ್ತಾಳೆ, ಮದುವೆ ನಿಲ್ಲುತ್ತಾ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿತ್ತು. ಈಸಂದರ್ಭದಲ್ಲಿಗೌತಮ್ಹಾಗೂ

ಆರತಿ ಮದುವೆಯಲ್ಲಿ, ಗೌತಮ್ ಮೊದಲ ಹೆಂಡ್ತಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ. ಹೀಗಾಗಿ ಸಂಚಿಕೆಯಲ್ಲಿ ರೋಚಕ ತಿರುವ ಪಡೆಯುವ ಸಾಧ್ಯತೆ ಇದೆ. ಈಗಾಗಲೇ ಮಂಟಪದಲ್ಲಿ ಆರತಿ ಪಕ್ಕ ಕುಳಿತುಕೊಂಡು ಆರತಿ ಅವರನ್ನು ಮದುವೆಯಾಗಲು ರೆಡಿಯಾಗಿರುವ ಗೌತಮ್ ನಿಜಕ್ಕೂ ಆರತಿ ಅವರನ್ನೇ ಮದುವೆಯಾಗುತ್ತಾರಾ? ಅಥವಾ ಗೌತಮ್ ಹೆಂಡತಿ ಮಧ್ಯೆ ಪ್ರವೇಶದಿಂದ ಮದುವೆ ನಿಂತು ಹೋಗುತ್ತಾ ಎನ್ನುವ ಕುತೂಹಲಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಕ್ಕಬೇಕಿದೆ

Comments

comments

Similar Articles

Top