ಸೌತ್ ನ ಜ್ಯೂನಿಯರ್ ಶ್ರೇಯಾ ಘೋಷಾಲ್ ‘ಅಲಾ ಬಿ ಬಾಲ’ ಕನ್ನಡಕ್ಕೆ ಎಂಟ್ರಿ..!

ಹೊಸದೊಂದು ನಿರೀಕ್ಷೆಯನ್ನ ಹುಟ್ಟುಹಾಕಿರುವ ಹೊಸಬರೇ ಸೇರಿ ಸಿದ್ದ ಮಾಡಿರುವ ಸಿನಿಮಾಅಂದವಾದ‘.. ಜೈ ಹಾಗು ಅನುಷಾ ಜೋಡಿಯಾಗಿ ಕಾಣಿಸಿಕೊಂಡಿರುವ ಈಅಂದವಾದಸಿನಿಮಾದಲ್ಲಿ ಇಂಪಾದ ಹಾಡುಗಳ ಮಾಧುರ್ಯವಿದೆ.. ಸಂಗೀತ ನಿರ್ದೇಶಕ ವಿಕ್ರಮ್ ವರ್ಮನ್ ಮ್ಯೂಸಿಕ್ ಈಗಾಗ್ಲೇ ಹಾಡುಗಳಿಗೆ ಒಂದೊಳ್ಳೆ ಗೆಲುವನ್ನ ನೀಡಿದೆ..

ಅದರಲ್ಲು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿರುವ ಟೈಟಲ್ ಟ್ರ್ಯಾಕ್ ಗೆ ವಿಜಯ್ ಪ್ರಕಾಶ್ ಹಾಗು ಸೌತ್ ಸಿನಿ ದುನಿಯಾದಲ್ಲಿ ಜ್ಯೂನಿಯರ್ ಶ್ರೇಯಾ ಘೋಷಾಲ್ ಎಂದೇ ಖ್ಯಾತಿ ಪಡೆದಿರುವ ಅಲಾ ಬಿ ಬಾಲ ಹಾಡಿದ್ದಾರೆ.. ಮಲೆಯಾಳಂ ಸಿನಿಮಾ ರಂಗದಲ್ಲಿ ತನ್ನ ಗಾಯನದ ಮೂಲಕ ಹೆಸರು ಮಾಡಿರುವ ಸಿಂಗರ್ ಅಲಾ ಬು ಬಾಲ ರೆಹಮಾನ್ ಸ್ಟುಡಿಯೋದ ಖಾಯಂ ಗಾಯಕಿ, ‘ಅಂದವಾದಚಿತ್ರದ ಮೂಲಕ ಇಲ್ಲು ಮೋಡಿ ಮಾಡಲು ಹೊರಟ್ಟಿದ್ದಾರೆ..

ಡೈರೆಕ್ಟರ್ ಚಲ ನಿರ್ದೇಶನ ಮಾಡಿರೋ ಈ ಚಿತ್ರದ ವಿಡಿಯೋ ಸಾಂಗ್ ಹಾಗು ಲಿರಿಕಲ್ ಹಾಡುಗಳು ಕೇಳುಗರನ್ನ ಇಂಪ್ರೆಸ್ ಮಾಡಿದ್ದು ಆದಷ್ಟು ಬೇಗ ತೆರೆಗೆ ಬರುವ ತಯಾರಿ ನಡೆಸಿದೆ..

Comments

comments

Similar Articles

Top