ಮರ್ಯಾದೆಯಿಂದ ನಿವೃತ್ತಿ ಘೋಷಿಸಿ ಹೊರಹೋಗಿ.. ಧೋನಿಗೆ ಹೀಗದಿದ್ಯಾರು ಗೊತ್ತಾ..?

ಮಹೇಂದ್ರ ಸಿಂಗ್ ಧೋನಿ.. ದಶಕಗಳ ವಿಶ್ವಕಪ್ ಕನಸನ್ನ  2011 ರಲ್ಲಿ ನನಸು ಮಾಡಿದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್.. 2019 ರ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗಾಗಿ ಧೋನಿ ಆಡಿದ ಆಟದ ಬಗ್ಗೆ ಇಡೀ ವಿಶ್ವವೇ ಮೆಚ್ಚಿಕೊಂಡಿದೆ.. ಎಂಎಸ್ ಡಿ ಇನ್ನು ಕೆಲ ವರ್ಷಗಳು ತಂಡದಲ್ಲಿದ್ದು ಯುವ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಬೇಕು ಎನ್ನುವ ಮಾತುಗಳು ಕೇಳಿ ಬಂದಿದೆ..

ಇನ್ನು ದೇಶಾದ್ಯಂತ ಧೋನಿ ನಿವೃತ್ತಿ ನೀಡಬಾರದು ಅಂತಾನು ಹೇಳಲಾಗುತ್ತಿದೆ.. ಆದರೆ ಧೋನಿ ಈ ಬಗ್ಗೆ ಎಂದು ಯಾರೊಂದಿಗು ಚರ್ಚೆ ಮಾಡಿಲ್ಲ.. ನಿವೃತ್ತಿ ಬಗ್ಗೆ ಮಾತನಾಡಿಲ್ಲ.. ಹೀಗಿದ್ರು ಈ ವಿಶ್ವಕಪ್ ಬಳಿಕ ಧೋನಿ ನಿವೃತ್ತಿ ನೀಡುತ್ತಾರೆ ಅನ್ನೋ ಮಾತುಗಳಿಗೇನು ಕಡಿಮೆ ಇಲ್ಲ.. ಮುಂಬರಲಿರುವ ಟಿ-20 ವಿಶ್ವಕಪ್ ವರೆಗು ಧೋನಿ ತಂಡದಲ್ಲಿ ರಲು ಇಚ್ಚಿಸಿದ್ದಾರೆ ಎಂಬ ಬಗ್ಗೆಯು ಸುದ್ದಿಗಳಿವೆ

ಆದರೆ ಈ ನಡುವೆ ಆಯ್ಕೆ ಸಮಿತಿಯ ಮುಖ್ಯಸ್ಥರಾದ ಪ್ರಸಾದ್, ಮುಂಬರಲಿರುವ ವಿಂಡೀಸ್ ಪ್ರವಾಸಕ್ಕು ಮುನ್ನ ಧೋನಿ ಅವರು ತಮ್ಮ ನಿವೃತ್ತಿ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.. ಇದನ್ನ ಹೊರತಾಗಿಯು ಬಿಸಿಸಿಐನ ಅಧಿಕಾರಿಯೊಬ್ಬರು ಧೋನಿ ನಿವೃತ್ತಿಯ ಬಗ್ಗೆ ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದ್ದು ಸದ್ಯ ವ್ಯಾಪಕ ಟೀಕೆಗೆ ಗುರಿಯಾಗಿದೆ..

2020 ರಲ್ಲಿ ನಡೆಯಲಿರುವ ವಿಶ್ವಕಪ್ ನಲ್ಲಿ ಧೋನಿ ಆಡಲು ಇಚ್ಛಿಸಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಮುಂಬರಲಿರುವ ಟಿ-20 ವಿಶ್ವಕಪ್ ಗೆ ನಾವು ಧೋನಿಯನ್ನ ಪರಿಗಣಿಸಿಲ್ಲ.. ಅವರ ಸ್ಥಾನವನ್ನ ತುಂಬಲು ಯುವ ಪಡೆ ಸಿದ್ದವಾಗಿದ್ದು, ಮರ್ಯಾದೆಯಿಂದ ನಿವೃತ್ತಿ ಘೋಷಿಸಿ ಹೊರ ನಡೆಯಬೇಕು ಎಂದಿದ್ದಾರೆ

Comments

comments

Similar Articles

Top