ಯುವರತ್ನ ಸಿನಿಮಾಗೆ ಬಂದ್ರು ಸೌತ್ ನ ಫೇಮಸ್ ಮ್ಯೂಸಿಕ್ ಡೈರೆಕ್ಟರ್..!! ಹೇಗಿದೆ BGM ಕೇಳಿ..!!

ಅಪ್ಪು ಅಭಿಮಾನಿಗಳು ಕಾತುರರಾಗಿ ಕಾಯುತ್ತಿರುವ ಸಿನಿಮಾ ಯುವರತ್ನ.. ಹಲವಾರು ವಿಶೇಷತೆಗಳಿಂದ ಕೂಡಿರುವ ಈ ಚಿತ್ರದ ಶೂಟಿಂಗ್ ವೇಗವಾಗಿ ಸಾಗುತ್ತಿದೆ.. ಎಲ್ಲ ಪ್ಲಾನ್ ಪ್ರಕಾರವೆ ನಡೆಯುತ್ತಿದ್ದು ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಗಿಯುವ ಹಂತವನ್ನ ತಲುಪಿದೆ‌‌.. ಹೀಗಿರುವಾಗಲೇ ಚಿತ್ರತಂಡ ಮತ್ತೊಂದು ಖುಷಿ ವಿಚಾರವನ್ನ ಹೊರ ಹಾಕಿದೆ‌.. ಅದು ಅಪ್ಪು ಫ್ಯಾನ್ಸ್ ಗೆ ಹೊಳಿಗೆ ಊಟ ನೀಡಿದಂತಿದೆ..

ಹೌದು, ಯುವರತ್ನ ಚಿತ್ರಕ್ಕೆ ಮ್ಯೂಸಿಕ್ ಮಾಡಲ್ಲಿದ್ದಾರೆ ಎಸ್ ತಮನ್.. ಈಗಾಗ್ಲೇ ಪವರ್ ಹಾಗು ಚಕ್ರವ್ಯೂಹ ಸಿನಿಮಾಗಳಲ್ಲಿ ಹಿಟ್ ಹಾಡುಗಳನ್ನ ನೀಡಿದ್ದ ತಮನ್ ಮತ್ತದೆ ಜಾದುವನ್ನ ಯುವರತ್ನದಲ್ಲು ಮೂಡಿಸಲು ಸಿದ್ದವಾಗಿದ್ದಾರೆ.. ಈ ಮೂಲಕ ಯುವರತ್ನ ಸಿನಿಮಾ ಹಾಡುಗಳ ಮೇಲೆ ಹೊಸದೊಂದು ನಿರೀಕ್ಷೆ ಹುಟ್ಟಿಕೊಳ್ಳುತ್ತಿದೆ

ಎಸ್ ತಮನ್ ಹಾಗು ಸಂತೋಷ್ ಆನಂದರಾಮ್ ಅವರ ಮೊದಲ ಕಾಂಬಿನೇಷನ್ ಇದಾಗಿದ್ದು, ಕಳೆದ ಬಾರಿ ತೆರೆ ಕಂಡ ರಾಜಕುಮಾರ ಸಿನಿಮಾಗೆ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ರು.. ಆದರೆ ಇದೇ ಮೊದಲ ಬಾರಿಗೆ ತಮನ್ ಸಂತೋಷ್ ಆನಂದರಾಮ್ ನಿರ್ದೇಶನದ ಚಿತ್ರಕ್ಕೆ ಸಂಗೀತ ನೀಡುತ್ತಿದ್ದು, ಅಪ್ಪು ಜೊತೆಗೆ ತಮನ್ ಅವರದ್ದು ಮೂರನೆ ಚಿತ್ರವಾಗಿದೆ..

ಪವರ್ ಸ್ಟಾರ್ ಸಿನಿಮಾದಲ್ಲಿ ಚಿತ್ರಕಥೆ, ಫೈಟ್ ಎಷ್ಟು ಮುಖ್ಯವಾಗುತ್ತೊ ಹಾಗೆಯೆ ಹಾಡು ಕೂಡ ಸಖತ್ತಾಗೆ ಸೌಂಡ್ ಮಾಡುತ್ತೆ.. ಹೀಗಾಗೆ ಎಸ್ ತಮನ್ ಈ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿಭಾಯಿಸುವ ಭರವಸೆ ಇದ್ದು ಮತ್ತೊಮ್ಮೆ ಕನ್ನಡ ಸಂಗೀತ ರಸಿಕರಿಗೆ ಹಿಟ್ ಗೀತೆಗಳನ್ನ ನೀಡುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಿಗು ಇದೆ..

Comments

comments

Similar Articles

Top