ದ್ರೋಣನಾಗಿ ದರ್ಬಾರ್ ಮಾಡಲು ಸಿದ್ದವಾದ ಕರುನಾಡ ಚಕ್ರವರ್ತಿ..!

ಡಾ..ಶಿವರಾಜ್ ಕುಮಾರ್ ಅವರ ಸಿನಿಮಾ ಗತ್ತು ಗಮ್ಮತ್ತು ಈಗ ತೀರ ಬದಲಾಗಿದೆ.. ಶಿವಣ್ಣ ಸೈನ್ ಮಾಡಿ ಒಪ್ಪಿಕೊಳ್ಳುತ್ತಿರುವ ಸಿನಿಮಾಗಳು ಸಿನಿ ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿಯಾಗಿವೆ.. ಚಿತ್ರದಿಂದ ಚಿತ್ರಕ್ಕೆ ವೆರೈಟಿ ಕ್ಯಾರೆಟರ್ ಗಳನ್ನ ಒಪ್ಪಿಕೊಂಡು ಅಪ್ಪಿಕೊಳ್ಳುತ್ತಿರುವ ಈ ಸೆಂಚುರಿ ಸ್ಟಾರ್ ನ ಮತ್ತೊಂದು ವಿಭಿನ್ನ ಸಿನಿಮಾ ತೆರೆಗೆ ಬರೋಕೆ ರೆಡಿಯಾಗಿದೆ.. ಅದೇ ಈ ದ್ರೋಣ ಸಿನಿಮಾ..

ಹೌದು, ಲಾಂಗ್ ಹಿಡಿದು, ಗನ್ ಹಿಡಿದು ಮೆರೆದಿದ್ದ ಶಿವಣ್ಣ ಈ ಪೆನ್ ಹಿಡಿದು ಹೊಸದೊಂದು ಪಾತ್ರದೊಂದಿಗೆ ನಿಮ್ಮ ಮುಂದೆ ಹಾಜರಾಗಲ್ಲಿದ್ದಾರೆ.. ಕೆಲ ತಿಂಗಳ ಹಿಂದೆ ಈ ಸಿನಿಮಾದ ಮುಹೂರ್ತ ಕಾರ್ಯವನ್ನ ನೆರವೇರಿಸಲಾಗಿತ್ತು.. ಅಂದು ಪೆನ್ ಹಿಡಿದ ಶಿವಣ್ಣ ಕ್ಯಾಮರಾಗೆ ಫೋಸ್ ನೀಡಿದ್ರು.. ಅಂದೆ ಈ ಚಿತ್ರದ ಬಗ್ಗೆ ಕುತೂಹಲ ಕೆರಳೋಕೆ ಶುರುವಾಗಿತ್ತು..

ಇಂದು ಈ ಸ್ಯಾಂಡಲ್ ವುಡ್ ಚಕ್ರವರ್ತಿಯ ಹುಟ್ಟುಹಬ್ಬ.. ಹೀಗಾಗೆ ದ್ರೋಣ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಅನ್ನ ಬಿಡುಗಡೆಗೊಳಿಸಿ ತೆರೆಗೆ ಬರೋಕೆ ನಾವ್ ರೆಡಿ ಆಗಿದ್ದೀವಿ ಅಂತಿದೆ.. ಡಾಲ್ಫಿನ್ ಮೀಡಿಯಾ ಹೌಸ್ ಬ್ಯಾನರ್ ನಲ್ಲಿ ಬಿ.ಮಹದೇವ್, ಸಂಗಮೇಶ್.ಬಿ, ಶೇಷು ಚಕ್ರವರ್ತಿ ದ್ರೋಣನಿಗೆ ಬಂಡವಾಳ ಹಾಕಿದ್ದಾರೆ.. ಪ್ರಮೋದ್ ಚಕ್ರವರ್ತಿ ಮನರಂಜನೆಯ ಜೊತೆಜೊತೆಗೆ ಸಾಮಾಜಿಕ ಸಂದೇಶ ಒಳಗೊಂಡಿರುವ ಪಕ್ಕ ಫ್ಯಾಮಿಲಿ ಎಂಟ್ರಟೈನರ್ ಸಿನಿಮಾವನ್ನ ನಿರ್ದೇಶನ ಮಾಡಿದ್ದು, ಶಿವಣ್ಣನ ವೃತ್ತಿ ಬದುಕಿನಲ್ಲಿ ವಿಶೇಷ ಚಿತ್ರವಾಗಿ ಉಳಿಯುವ ಭರವಸೆಯಲ್ಲಿದ್ದಾರೆ

Comments

comments

Similar Articles

Top