ರವಿಶಾಸ್ತ್ರಿ ವಿರುದ್ದ ತಾಳ್ಮೆ ಕಳೆದುಕೊಂಡ ವಿರಾಟ್-ದಾದ.. ಕೋಚ್ ತೆಗೆದುಕೊಂಡ ಆ ಕೆಟ್ಟ ನಿರ್ಧಾರವೇನು ಗೊತ್ತಾ.?

ನಿನ್ನೆ ನಡೆದ ಮ್ಯಾಚ್ ನ ಬಳಿಕ ಕ್ಯಾಪ್ಟನ್ ಕೊಹ್ಲಿ ರವಿಶಾಸ್ತ್ರಿ ಅವರ ತಪ್ಪು ನಿರ್ಣಯದ ಬಗ್ಗೆ ಕಿಡಿಕಾರಿದ್ದಾರೆ ಎನ್ನಲಾಗ್ತಿದೆ.. ತಾನು ಔಟ್ ಆಗಿ ಪೆವಿಲಿಯನ್ ಕಡೆ ಬರುತ್ತಿದ್ದ ಹಾಗೆ ರಿಷಬ್ ಪಂತ್ ಬ್ಯಾಟ್ ಹಿಡಿದು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದು ಕೊಹ್ಲಿಯ ಪಿತ್ತವನ್ನ ನೆತ್ತಿಗೇರಿಸಿದೆ.. ರಿಷಬ್ ಪಂತ್ ಅವರನ್ನ ನಾಲ್ಕನೆ  ಕ್ರಮಾಂಕದಲ್ಲಿ ಕಳಿಸಿದ್ಯಾಕೆ ಅಂತ ಕೋಚ್ ರವಿಶಾಸ್ತ್ರಿ ಅವರೊಂದಿಗೆ ವಾಗ್ವಾದ ಮಾಡಿದ್ದಾರೆ ಎಂದು ತಿಳಿದು ಬಂದಿದೆ.. ಕಡಿಮೆ ಓವರ್ ಗೆ ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ವಿಕೆಟ್ ಕಾಯ್ದುಕೊಂಡು ಆಡುವ ಧೋನಿ ಅವಶ್ಯಕತೆ ಇತ್ತು.. ಆದರೆ ಆಗ ಬ್ಯಾಟಿಂಗ್ ಮಾಡಲು ಬಂದಿದ್ದು ರಿಷಬ್‌.

ರಿಷಬ್ ಪಂತ್ ತಾಳ್ಮೆ ಆಟ ಪ್ರದರ್ಶಿಸದೆ ಬೇಗನೆ ಔಟ್ ಆಗಿ ಬಂದ್ರು.. ಅವರ ಸ್ಥಾನದಲ್ಲಿ ಧೋನಿ ಅವರನ್ನ ಕಳುಹಿಸಬೇಕಿತ್ತು ಅಂತ ಸ್ವತಃ ಗಂಗೂಲಿ ಕೂಡ ಅಭಿಪ್ರಾಯ ಪಟ್ಟಿದ್ದಾರೆ.. ಧೋನಿ ಮೊದಲೇ ಬಂದು ವಿಕೆಟ್ ಕಾಯ್ದುಕೊಂಡಿದ್ದರೆ, ರಿಷಬ್, ದಿನೇಶ್ ಕಾರ್ತಿಕ್ ಹಾಗು ಪಾಂಡ್ಯಗೆ ಮಾರ್ಗದರ್ಶನ ನೀಡಿ ಮ್ಯಾಚ್ ನ ಗತಿಯನ್ನ ಬದಲಿಸುತ್ತಿದ್ರು ಅಂತ ಗಂಗೂಲಿ ಕೂಡ ಅಭಿಪ್ರಾಯ ಪಟ್ಟಿದ್ದಾರೆ..

ಬೇಡವಾದ ಹೊಡೆತಕ್ಕೆ ಕೈ ಹಾಕಿ ರಿಷಬ್ ಔಟ್ ಆಗಿದ್ರು.. ರಿಷಬ್ ಔಟ್ ಆಗುತ್ತಿದ್ದ ಹಾಗೆ ರವಿಶಾಸ್ತ್ರಿ ಬಳಿಗೆ ತೆರಳಿದ ಕೊಹ್ಲಿ ಕೋಚ್ ರವಿಶಾಸ್ತ್ರಿ ಅವರ ಆಯ್ಕೆಯನ್ನ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ

Comments

comments

Similar Articles

Top