ಧೋನಿ ಬಲಿ ಪಡೆದ ಕೆಟ್ಟ ತೀರ್ಪು.. ಅಂಪೈರ್ ಗಳ ಎಡವಟ್ಟಿನಿಂದ ವಿಶ್ವಕಪ್ ಕಳೆದುಕೊಂಡ ಭಾರತ..!!

ನಿನ್ನೆ ಪಂದ್ಯವನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅರಗಿಸಿಕೊಳ್ಳಲು ಇನ್ನು ಆಗಿಲ್ಲ.. ವಿಶ್ವಕಪ್ ನ ಬಲಿಷ್ಠ ತಂಡವಾಗಿದ್ದ ಭಾರತ ಈ ಬಾರಿ ವರ್ಲ್ಡ್ ಕಪ್ ನ ಭಾರತಕ್ಕೆ ತರಲಿದೆ ಎಂದು ಕಾದಿದ್ದ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಸೆ ಧೋನಿ ರನ್ ಔಟ್ ಮೂಲಕ ಅಂತ್ಯವಾಗಿತ್ತು.. ಗೆಲುವನ್ನ ಕೀವಿಸ್ ನಿಂದ ಕಿತ್ತುಕೊಳ್ಳಲು ಮುಂದಾಗಿದ್ದ ಧೋನಿ ಬಲಿ ಪಡೆದ ಆ ರನ್ ಔಟ್, ಅದಕ್ಕೂ ಮೊದಲು ಫಿಲ್ಡಿಂಗ್ ನಲ್ಲಿ ನಡೆದಿದ್ದ ಎಡವಟ್ಟು ಎಲ್ಲವು ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ..

40 ರಿಂದ 50 ಓವರ್ ನ ವರೆಗು ಮೂರನೇ ಪವರ್ ಪ್ಲೇ ಆನ್ ಇರುತ್ತೆ.. ಈ ಸಂದರ್ಭದಲ್ಲಿ 5 ಜನ ಫೀಲ್ಡರ್ ಗಳು ಬೌಂಡರಿಯಲ್ಲಿ ಇರಬಹುದು.. ಇನ್ನುಳಿದ ಆಟಗಾರರು 30 ಯಾರ್ಡ್ ಸರ್ಕಲ್ ನಲ್ಲಿ ಇರಬೇಕು.. ಆದರೆ ಫೆರ್ಗ್ಯುಸನ್ ಎಸೆದ 48.2ನೇ ಎಸೆತದಲ್ಲಿ 6 ಜನ ಫೀಲ್ಡರ್ಸ್ ಸಿಕ್ಸ್ ಬೌಂಡರಿಯಲ್ಲಿದದ್ದು ಕಂಡು ಬಂದಿದೆ.. ಈ ರೀತಿ ನಿಯಮ ಮೀರಿ ಫೀಲ್ಡಿಂಗ್ ನಿಲ್ಲಿಸಿದ್ರೆ ನೋ ಬಾಲ್ ಅನ್ನ ನೀಡಲಾಗುತ್ತೆ..

ಆದರೆ ಇದನ್ನ ಗಮನಿಸಿದ ಅಂಪೈರ್ ಸುಮ್ಮನಾಗಿದ್ರು.. ಅದರ ನಂತರದ ಬಾಲ್ ನಲ್ಲಿ ಧೋನಿ ರನ್ ಔಟ್ ಆಗಿದ್ರು.. ಆದರೆ ಅಂಪೈರ್ ಮೊದಲೇ ಎಚ್ಚೆತ್ತುಕೊಂಡು ನೋ ಬಾಲ್ ನೀಡಿದ್ರೆ ಧೋನಿ ರನ್ ಔಟ್ ಆದ ಎಸೆತ ಫ್ರೀ ಹಿಟ್ ಆಗಿರುತ್ತಿತ್ತು.. ಆಗ ಧೋನಿ ಆ ಬಾಲ್ ಅನ್ನ ಬೇರೆಯದ್ದೆ ರೀತಿ ಹೊಡೆಯುತ್ತಿದ್ರು.. ಸದ್ಯ ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.. ಅಂಪೈರ್ ಗಳು ಇಂತಹ ಸೂಕ್ಷ್ಮ ಸಮಯದಲ್ಲಿ ಇಂತಹ ವಿಚಾರಗಳನ್ನ ಗಮನಿಸದೆ ಇದ್ರಾ..? ಅಥವಾ ಗ್ರಾಫಿಕ್ಸ್ ನಲ್ಲಿ ತಪ್ಪಾಗಿದ್ಯ ಗೊತ್ತಿಲ್ಲ..

ಆದರೆ ಆ ಒಂದು ಬಾಲ್, ಆ ಒಂದು ರನ್ ಔಟ್, ವಿಶ್ವಕಪ್ ಗೆಲ್ಲುವ ಕೊಹ್ಲಿ ಬಾಯ್ಸ್ ಆಸೆಗೆ ತಣ್ಣೀರು ಹಾಕಿತ್ತು.. ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನ ಛಿದ್ರವಾಗಿಸಿತ್ತುಸದ್ಯ ಈ ಘಟನೆ ಬಗ್ಗೆ ಐಸಿಸಿ ಕ್ರಿಕೆಟ್‌ ಮಂಡಳಿ ಇನ್ನಷ್ಟೇ ಸ್ಪಷ್ಟಪಡಿಸಬೇಕಿದ್ದು ನಿಜಾಂಶ ಹೊರ ಬೀಳಬೇಕಿದೆ..

Comments

comments

Similar Articles

Top