ಇದೇ ಶುಕ್ರವಾರ ಥಿಯೇಟರ್ ಅಂಗಳಕ್ಕೆ ಹೆಣೈಕ್ಳ ‘ಯಾನ’

ಈ ಶುಕ್ರವಾರದಂದು ಕನ್ನಡ ಚಿತ್ರರಂಗಕ್ಕೆ ಒಂದೊಳ್ಳೆ ದಿನವಾಗುವ ಎಲ್ಲ ಸಾಧ್ಯತೆಗಳಿವೆ.. ಯಾಕಂದ್ರೆ ಕನ್ನಡದಲ್ಲಿ ಕನ್ನಡದ ನಾಯಕಿಯರನ್ನೆ ಹುಡುಕುವ ಪರಿಸ್ಥಿತಿ ಇರುವಾಗ ಒಟ್ಟಿಗೆ ಮೂರು ಜನ ನಾಯಕಿಯರು ಚಂದನವನದಲ್ಲಿ ಕಂಗೊಳಿಸಲು ವೇದಿಕೆ‌ ಸಿದ್ದವಾಗಿದೆ.. ಹೌದು ಇದೇ ಶುಕ್ರವಾರ ತೆರೆಗೆಯಾನಸಿನಿಮಾದ ಮೂಲಕ ಜೈ ಜಗದೀಶ್ ಅವರ ಮೂರು ಜನ ಪುತ್ರಿಯರು ನಾಯಕಿಯರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ

ಯಾನಹರೆಯದ ಹೃದಯಗಳ ಮಿಡಿತ.. ಇದೊಂದು ಪಕ್ಕ ಯೂಥ್ ಸಬ್ಜೆಕ್ಟ್.. ವಿಜಯ್ ಲಕ್ಷ್ಮೀ ಸಿಂಗ್ ಲಾಂಗ್ ಗ್ಯಾಪ್ ಪಡೆದು ಮತ್ತೆ ಡೈರೆಕ್ಟರ್ ಆಗಿ ವಾಪಸ್ ಆಗಿರುವ ಸಿನಿಮಾ.. ಈ ಚಿತ್ರದಲ್ಲಿ ತನ್ನ ಮೂರು ಮಕ್ಕಳಾದ ವೈಭವಿ, ವೈನಿಧಿ ಹಾಗು ವೈಸಿರಿ ಗೆ ಆಕ್ಷನ್ ಕಟ್ ಹೇಳುವುದರ ಜೊತೆಗೆ ಚಿತ್ರ ನಿರ್ಮಾಣದ ಜವಾಬ್ದಾರಿಯನ್ನ ತಾವೇ ಹೊತ್ತಿದ್ದಾರೆ.. ಶೂಟಿಂಗ್ ಹಂತದಿಂದಲು ಗಮನ ಸೆಳೆಯುತ್ತಿದ್ದಯಾನಗೆ ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ರೆ, ಹಿನ್ನೆಲೆ ಸಂಗೀತವನ್ನ ಅನೂಪ್ ಸೀಳಿನ್ ನೀಡಿದ್ದಾರೆ.. ಸಿಂಪಲ್ ಸುನಿ ಹಾಗು ಬಿಎ ಮಧು ಸಂಭಾಷಣೆ ಚಿತ್ರಕ್ಕಿದೆ..

ಈ ಮೂರು ಹುಡುಗಿಯರ ಸುತ್ತ ಸುತ್ತುವ ಸ್ಟೋರಿಯಲ್ಲಿ ಅನಂತ್ ನಾಗ್, ರಂಗಾಯಣ ರಘು, ಚಿಕ್ಕಣ್ಣ, ಶಿವರಾಜ್ ಕೆಆರ್ ಪೇಟೆ, ಸುಹಾಸಿನಿ, ಸುಮುಖ್ ಚಕ್ರವರ್ತಿ ಅಭಿಷೇಕ್ ಸೇರಿದಂತೆ ಹಲವರಿದ್ದಾರೆ.. ಬೆಂಗಳೂರು ಹಾಗು ಗೋವಾದಲ್ಲಿ ಚಿತ್ರೀಕರಣ ನಡೆದಿದೆ.. ಟ್ರೇಲರ್ ಹಾಗೆ ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದು, ಇದೇ ಶುಕ್ರವಾರ ಯಾನ ತೆರೆಗೆ ಬರಲಿದೆ..

 

Comments

comments

Similar Articles

Top