ತಾಯ್ತನದ ಖುಷಿಯನ್ನ ನೀರಿನಾಳದಲ್ಲಿ ಫೋಟೋಶೂಟ್ ಮಾಡಿಸಿದ ಸುದೀಪ್ ಚಿತ್ರದ ನಾಯಕಿ.

ಪ್ರತಿಯೊಂದು ಹೆಣ್ಣು ತನ್ನ ಮನೆ ಮನ ಬೆಳಗಲು ಹಾಗೂ ತನ್ನ ಕುಟುಂಬದಲ್ಲಿ ಹರುಷ ತರಲು ಒಂದು ಮುದ್ದಾದ ಮಗು ಬರುತ್ತಿದೆ ಎಂದು ತಿಳಿದಾಗ ಆಕೆಯ ಸಂಭ್ರಮ ಸಡಗರ ಹೇಳ ತೀರದು. ತನ್ನ ಕರುಳಿನ ಕುಡಿಯನ್ನು ಬರಮಾಡಿಕೊಳ್ಳಲು ಅತ್ಯಂತ ಕಾಳಜಿ ಹಾಗೂ ಅತ್ಯಂತ ಪ್ರೀತಿಯಿಂದ ತಯಾರಿ ಮಾಡಿಕೊಳ್ಳುತ್ತಾರೆ.

ತನ್ನ ತಾಯ್ತನದ ನೆನಪುಗಳು ಎಂದೂ ಮಾಸದಿರಲಿ ಎಂಬ ಕಾರಣದಿಂದ, ಬಹಳಷ್ಟು ಮಂದಿ ಫೋಟೋ ಶೂಟ್ ಮಾಡಿಸುವುದು ಈಗ ಟ್ರೆಂಡ್ ಆಗಿ ಬಿಟ್ಟಿದೆ. ಎಲ್ಲರೂ ಪಾರ್ಕ್ ನಲ್ಲಿ ರೆಸಾರ್ಟ್ ಗಳಲ್ಲಿ ಫೋಟೋ ಶೂಟ್ ಮಾಡಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಬ್ಬರು ನಟಿ ಮಣಿ ನೀರಿನಾಳದಲ್ಲಿ ಫೋಟೋ ಶೂಟ್ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.

ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಜೊತೆ ವರದನಾಯಕ ಚಿತ್ರದಲ್ಲಿ ಅಭಿನಯಿಸಿದ್ದ ಬಹುಭಾಷಾ ನಟಿ ಸಮೀರಾ ರೆಡ್ಡಿ, ಒಂಭತ್ತು ತಿಂಗಳ ತುಂಬು ಗರ್ಭಿಣಿ. ಸಮೀರಾ ನೀರಿನೊಳಗೆ ಫೋಟೊ ಶೂಟ್ ಮಾಡಿಸಿ, ಆ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ. ತಮ್ಮ ಒಂಬತ್ತನೇ ತಿಂಗಳ ಫೋಟೋ ಶೂಟ್ ಬಗ್ಗೆ ಸಮೀರಾ ಹೇಳಿದ್ದೇನು ಗೊತ್ತಾ? ಮುಂದೆ ನೋಡಿ..

2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಮೀರಾ ತನ್ನ ತಾಯ್ತನದ ಬಗ್ಗೆ ಹೀಗೆ ಬರೆದು ಕೊಂಡಿದ್ದಾರೆ. “ನನ್ನ ತಾಯ್ತನದ ೯ನೇ ಮಾಸದ ಸೌಂದರ್ಯತೆಯನ್ನು ಸಂಭ್ರಮಿಸಲು ನನಗೆ ಸಂತೋಷವಾಗುತ್ತಿದೆ. ಆಯಾಸ, ಆತಂಕ, ಕುತೂಹಲ ಹಾಗು ತಾಯ್ತನದ ಸುಂದರತೆ ಈ ತಿಂಗಳಲ್ಲಿ ಬಹಳ ಕಾಡುತ್ತದೆ. ನಾವು ಜೀವನದೇ ಎಲ್ಲಾ ಘಟ್ಟವನ್ನು ಪ್ರೀತಿಸಲೇಬೇಕು. ಎಲ್ಲೆಡೆ ಒಳ್ಳೆಯದನ್ನೇ ಕಾಣಬೇಕು ಹಾಗು ನನ್ನ ಈ ವೇಳೆಯ ಫೋಟೋಗಳನ್ನು ಶೇರ್ ಮಾಡಲು ನನಗೆ ಖುಷಿಯಾಗುತ್ತಿದೆ.”

Comments

comments

Similar Articles

Top