ND vs NZ ಸೆಮಿಫೈನಲ್ ಗೆ ಟೀಮ್ ಇಂಡಿಯಾದಲ್ಲಿ ಈ 2 ಬದಲಾವಣೆ ಬಹು ಮುಖ್ಯ ಎಂದ ಸಚಿನ್..

ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಟೀಮ್ ಇಂಡಿಯಾ ಉತ್ತಮ ಗೆಲುವನ್ನ ದಾಖಲಿಸಿದೆ.. ಇದೇ ಪಂದ್ಯದಲ್ಲಿ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಸ್ಥಾನ ಪಡೆದ ರವೀಂದ್ರ ಜಡೇಜಾ ತಮ್ಮ ಆಯ್ಕೆಯನ್ನ ಆಟದ ಮೂಲಕ ಸಮರ್ಥಿಸಿಕೊಂಡಿದ್ದಾರೆ.. ಶಮಿ ಅವರನ್ನ ಕೂರಿಸಿ ಭುವನೇಶ್ವರ್ ಕುಮಾರ್ ಗೆ ಅವಕಾಶ ನೀಡಲಾಗಿತ್ತಾದ್ರು, ಅಂದಿನ ಪಂದ್ಯದಲ್ಲಿ ಭುವಿ ಕ್ಲಿಕ್ ಆಗಲಿಲ್ಲ..

ಹಾಗಿದ್ರೆ ನಾಳೆ ನ್ಯೂಜಿಲೆಂಡ್ ವಿರುದ್ದ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಆಡುವ 11ರ ಬಳಗದಲ್ಲಿ ಯಾರ ಇರಬೇಕು..? ಇರೋರಲ್ಲಿ ಯಾರು ಹೊರಗೆ ಹೋಗಬೇಕು ಎಂಬ ಗೊಂದಲ ಎಲ್ಲರಲ್ಲು ಇದೆ.. ಇದಕ್ಕೆ ಸಚಿನ್ ತೆಂಡೂಲ್ಕರ್ ಉತ್ತರ ನೀಡಿದ್ದು ತಂಡದಲ್ಲಿ ಬದಲಾವಣೆಯನ್ನ ಬಯಸಿ ಸಲಹೆ ನೀಡಿದ್ದಾರೆ

ಪ್ರತಿ ಪಂದ್ಯದಲ್ಲಿ 5 ಜನ ಬೌಲರ್ ಗಳ ಜೊತೆಗೆ ಕಣ್ಣಕ್ಕಿಳಿದ ಟೀಮ್ ಇಂಡಿಯಾಗೆ ಆಸರೆಯಾಗಿರೋದು ಆಲ್ ರೌಂಡರ್ ಆದ ಹಾರ್ದಿಕ್ ಪಾಂಡ್ಯ, ಇವರನ್ನ ಬಿಟ್ಟು ಶಮಿ, ಬುಮ್ರಾ, ಚಾಹಲ್ ಅಥವಾ ಕುಲದೀಪ್ ಯಾದವ್ ತಂಡದಲ್ಲಿದ್ರು.. ಆದರೆ ಸೆಮಿಫೈನಲ್ ಗೆ ಭಾರತ 6ನೇ ಬೌಲರ್ ನ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದಿದ್ದಾರೆ ಸಚಿನ್..

ರವೀಂದ್ರ ಜಡೇಜಾ ಗೆ ಮುಂದಿನ ಪಂದ್ಯದಲ್ಲಿ ಅವಕಾಶ ನೀಡುವ ಮೂಲಕ ಅವರ ಸ್ಪಿನ್ ಅಸ್ತ್ರವನ್ನ‌ ಬಳಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ಶಮಿ ವಾಪಸ್ ತಂಡಕ್ಕೆ ಬರಬೇಕು ಎಂದಿದ್ದಾರೆ.. ಈ ಮೂಲಕ ದಿನೇಶ್ ಕಾರ್ತೀಕ್, ಭುವಿ ತಂಡದಿಂದ ಹೊರಗೆ ಉಳಿದ್ರೆ ಮತ್ತೊಬ್ಬ ಸ್ಪಿನರ್ ತಂಡ ಕೂಡಿಕೊಳ್ಳುವ ಸಾಧ್ಯತೆ ತಟ್ಟವಾಗಿರುವಂತೆ ಕಾಣುತ್ತಿದೆ..

Comments

comments

Similar Articles

Top