ದೊಡ್ಡಮನೆಯ ದೊಡ್ಡ ಮಗನಿಗೆ ಶಸ್ತ್ರಚಿಕಿತ್ಸೆ ಮಾಡಲಿರು ಆ ಡಾಕ್ಟರ್ ಯಾರು ಗೊತ್ತಾ..?

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಸಕ್ಸಸ್ ಕಂಡಿದೆ.. ಚಿತ್ರದ ಬಗ್ಗೆ ಸಿಕ್ಕಿರುವ ಒಳ್ಳೆ ರೆಸ್ಪಾನ್ಸ್ ಗೆ ಖುಷಿಯಾದ ಶಿವಣ್ಣ ಪೂರ್ವ ನಿಗದಿಯಾಗಿರುವ ವಿದೇಶಿ ಪ್ರಯಾಣಕ್ಕೆ ಹೊರಟಿದ್ದು ನಿಮಗೆ ಗೊತ್ತೆ ಇದೆ.. ಹೌದು ಸದ್ಯ ಸತತ ಶೂಟಿಂಗ್ ನಿಂದ ಕೊಂಚ ಬ್ರೇಕ್ ಪಡೆದುಕೊಂಡು ಪುಟ್ಟದೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಲುವಾಗಿ ಲಂಡನ್ ಗೆ ತೆರಳಿದ್ದಾರೆ

ಪತ್ನಿ ಹಾಗು ಪುತ್ರಿಯೊಂದಿಗೆ ಹೊರಟ ಶಿವಣ್ಣನಿಗೆ ಅಭಿಮಾನಿಗಳು ಶೀಘ್ರವಾಗಿ ಗುಣಮುಖವಾಗಿ ಬರುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ.. ಇದೇ ಜುಲೈ 10ನೇ ತಾರೀಖಿನಂದು ಶಸ್ತ್ರಚಿಕಿತ್ಸೆಗೆ ದಿನಾಂಕ ನಿಗದಿ ಮಾಡಲಾಗಿದ್ದು, ಇದನ್ನ ಖ್ಯಾತ ವೈದ್ಯರೊಬ್ಬರು ಮಾಡಲ್ಲಿದ್ದಾರೆ.. ಈ ವೈದ್ಯರೆ ಈ ಹಿಂದೆ ಎಸ್.ಎಂ.ಕೃಷ್ಣ ಹಾಗು ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ್ರಂತೆ

ಇವರ ನೇತೃತ್ವದಲ್ಲಿ ಶಿವರಾಜ್ ಕುಮಾರ್ ಅವರ ಶಸ್ತ್ರಚಿಕಿತ್ಸೆ ನಡೆಯಲ್ಲಿದ್ದು, ಒಂದು ತಿಂಗಳ ಕಂಪ್ಲೀಟ್ ಬೆಡ್ ರೆಸ್ಟ್ ಹಾಗು ಮೂರು ತಿಂಗಳ ಕಾಲ ಯಾವುದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಹಾಗಿಲ್ಲ.. ಆದಷ್ಟು ಬೇಗ ಶಿವಣ್ಣ ಗುಣಮುಖವಾಗಿ ಬರಲಿ ಎಂಬುದೊಂದು ಅಭಿಮಾನಿಗಳ ಆಶಯ

Comments

comments

Similar Articles

Top