ಭಯ ಹುಟ್ಟಿಸುವ ಹಾರರ್ ‘ಚಿತ್ರಕಥಾ’.. ಟ್ರೇಲರ್ ನೋಡಿದ್ರೆ ಸಿನಿಮಾ ಮಿಸ್ ಮಾಡೋಕಾಗಲ್ಲ

ಕನ್ನಡದಲ್ಲಿ ಹಾರರ್ ಸ್ಟೋರಿಗಳನ್ನ ಒಳಗೊಂಡ ಸಿನಿಮಾಗಳು ವಿರಳ.. ಅದರಲ್ಲು ಇಂತಹ ಸಿನಿಮಾಗಳು ಹತ್ತರಲ್ಲೊಂದು ಸೌಂಡ್ ಮಾಡಿದ್ರೆ ಹೆಚ್ಚು.. ಹೀಗಿರುವಾಗಲೇ ಟ್ರೇಲರ್ ಮೂಲಕವೆ ಮೈಜುಂ ಎನಿಸುವ ಎದೆ ಬಡಿತ ಏರಿಸುವ ಹಾರರ್ ಸಿನಿಮಾವೊಂದರ ಟ್ರೇಲರ್ ಹೊಸದೊಂದು ಕ್ಯೂರಿಯಾಸಿಟಿಯನ್ನ ಹುಟ್ಟಿಸುತ್ತಿದೆ.. ಹೌದು, ಅದೇ ಈಚಿತ್ರಕಥಾ

ಒಂದು ಬಣ್ಣದ ಚಿತ್ತಾರ.. ಅದರ ಹಿಂದೊಂದು ಕರಾಳ ಕಥೆ.. ಮುಂದಿನ ಜಮಾನಕ್ಕೆ ಅದರ ಸ್ಟೋರಿ ಸಾಗಿ ಬರೋದು, ಬೆಳಕು ಹಾಗು ಕತ್ತಲ ನಡುವೆ ಭಯ ಹುಟ್ಟಿಸುವ ಸನ್ನಿವೇಶಗಳು ಎಲ್ಲವು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸುವಂತೆ ಮಾಡುತ್ತಿದೆ.. ಪಾತ್ರವರ್ಗದಿಂದ ಹಿಡಿದು ತಾಂತ್ರಿಕತೆಯವರೆಗುಚಿತ್ರಕಥಾಕ್ವಾಲಿಟಿ ಅದ್ಭುತ ಎನ್ನುವಂತಿದೆ..

ಸುಧಾರಾಣಿ, ದಿಲೀಪ್ ರಾಜ್, ಸುಜೀತ್ ರಾಥೋಡ್, ತಬಲ ನಾಣಿ, ಬಿ.ಜಯಶ್ರೀ ಹಾಗು ಅನುಶಾ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.. ಯಶಸ್ವಿ ಬಾಲಾದಿತ್ಯ ನಿರ್ದೇಶನವು ಈ ಹಾರರ್ ಸಸ್ಪೆನ್ಸ್ ಸಿನಿಮಾಗಿದ್ರೆ, ತನ್ವಿಕ್ ಕ್ಯಾಮರಾ ವರ್ಕ್ ಹಾಗು ಚೇತನ್ ಕುಮಾರ್ ಮ್ಯೂಸಿಕ್ ಚಿತ್ರಕಥಾದ ಮತ್ತೊಂದು ಹೈಲೆಟ್ ಆಗಿದೆ.. ಸದ್ಯಕ್ಕೆ ಟ್ರೇಲರ್ ನ ನೋಡಿದವರಲ್ಲಿ ಸಿನಿಮಾದಲ್ಲಿ ಮತ್ತಷ್ಟು ತಿರುವುಗಳ ಜೊತೆ ಜೊತೆಗೆ ಹಾರರ್ ಲೋಕದ ಅನುಭವ ಪಡೆಯುವ ಭರವಸೆಯನ್ನ ಉಂಟು ಮಾಡುತ್ತಿದ್ದು, ಜುಲೈ 12ಕ್ಕೆ ತೆರೆಗೆ ಬರಲಿದೆ..

Comments

comments

Similar Articles

Top