ಯುವರತ್ನಗೆ ಎಂಟ್ರಿ ಕೊಟ್ಟ ಸೌತ್ನ ಸ್ಟಾರ್ ವಿಲನ್..

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತಯುವರತ್ನಸಿನಿಮಾದ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ.. ತಮಿಳಿನ ನಟಿ ಸಯೀಷಾ ನಾಯಕಿಯಾಗಿ ಮೊದಲ ಬಾರಿಗೆ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.. ವಿಲನ್ ಶೇಡ್ ನಲ್ಲಿ ಧನಂಜಯ್ ಕೂಡ ಸಿನಿಮಾದಲ್ಲಿ ಇರಲ್ಲಿದ್ದು, ರಾಧಿಕಾ ಶರತ್ ಕುಮಾರ್ ಬಹು ಮುಖ್ಯವಾದ ಪಾತ್ರವನ್ನ ಪ್ಲೇ ಮಾಡ್ತಿದ್ದಾರೆ..

ಈ ಎಲ್ಲರ ಜೊತೆಗೆ ಈಗ ಸೌತ್ ಸ್ಟಾರ್ ಖಳನಟ ಕನ್ನಡಿಗ ಪ್ರಕಾಶ್ ರಾಜ್ ಯುವರತ್ನ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.. ಹೌದು, ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋತ ಬಳಿಕ ಈಗ ಮತ್ತೆ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ.. ರಾಜಕುಮಾರ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಿದ್ದ ಪ್ರಕಾಶ್ ರಾಜ್ ಅವರೆ ಯುವರತ್ನದಲ್ಲು ಇರಲ್ಲಿದ್ದಾರೆ

ಪ್ರಿನ್ಸಿಪಾಲ್ ಪ್ರಕಾಶ್ ರಾಜ್..

ಯುವರತ್ನ ಸಿನಿಮಾದಲ್ಲಿ ಈ ನಟನ ಪಾತ್ರಕ್ಕೆ ಹೆಚ್ಚು ಮಹತ್ವವಿದ್ದು ಕಾಲೇಜಿನ ಪ್ರಿನ್ಸಿಪಾಲ್ ಆಗಿ ಬಣ್ಣ ಹಚ್ಚಲ್ಲಿದ್ದಾರೆ.. ಪಾತ್ರದ ಬಗ್ಗೆ ಸಂತೋಷ್ ಆನಂದರಾಮ್ ಹೇಳುತ್ತಿದ್ದ ಹಾಗೆ ಒಪ್ಪಿರುವ ಪ್ರಕಾಶ್ ರಾಜ್ ತಮ್ಮ ಹೊಸ ಬಗೆಯ ಪಾತ್ರವನ್ನ ಪೋಷಿಸಲು ರೆಡಿಯಾಗಿಬಿಟ್ಟಿದ್ದಾರೆ.

ಚುನಾವಣೆಯಲ್ಲಿ ಹೆಚ್ಚು ಸಕ್ರೀಯರಾಗಿದ್ದ ಪ್ರಕಾಶ್ ರಾಜ್ ಚಿತ್ರರಂಗಕ್ಕೆ ವಾಪಸ್ ಆಗುತ್ತಿದ್ದ ಹಾಗೆ ಕನ್ನಡ ಮಾತ್ರವಲ್ಲದೆ ತಮಿಳು ಹಾಗು ತೆಲುಗಿನಲ್ಲು ಹೆಚ್ಚು ಹೆಚ್ಚು ಸಿನಿಮಾಗಳ ಆಫರ್ ಬರುತ್ತಿದ್ದು, ಅಲ್ಲು ಕೂಡ ಕೆಲ ಸಿನಿಮಾಗಳನ್ನ ಒಪ್ಪಿಕೊಂಡಿರುವ ಬಗ್ಗೆ ಸುದ್ದಿ ಇದೆ.. ಅದೇನೆ ಇರಲಿ ಯುವರತ್ನನ ಕಾಲೇಜ್ ಅಡ್ಡದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು ಮಿಂಚಲ್ಲಿದ್ದಾರೆ..

Comments

comments

Similar Articles

Top