ತನ್ನ ನೆಚ್ಚಿನ ಮಹಿಳಾ ಅಭಿಮಾನಿಯ ಮದುವೆಗೆ ಅಪ್ಪು ಕೊಟ್ಟ ಸ್ಪೆಷಲ್ ಗಿಫ್ಟ್ ಇಲ್ಲಿದೆ ನೋಡಿ..

ದೊಡ್ಮನೆ ಅಂದ್ರೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದ್ಯೋ ಅಷ್ಟೇ ಪ್ರೀತಿ ಅಭಿಮಾನಿಗಳ ಮೇಲೆ ದೊಡ್ಮನೆ ಮಕ್ಕಳಿಗು ಇದೆ.. ಎಂದೆಂದಿಗೂ ಅವರಿಂದಲೇ ನಾವು, ಅಭಿಮಾನಿಗಳೆ ನಮ್ಮ ಮನೆ ದೇವ್ರು ಅನ್ನೋ ಅಣ್ಣಾವ್ರ ಕುಟುಂಬ ಅಭಿಮಾನಿಗಳ ಕುಟುಂಬದ ಜೊತೆಗೆ ವಿಶ್ವಾಸವನ್ನ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿದೆ..

ಅದರಲ್ಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಿದ್ದಾರೆ.. ಮಹಿಳಾ ಅಭಿಮಾನಿಗಳಿಗೆ ಅಪ್ಪು ಅಂದ್ರೆ ಅವರ ಚಿತ್ರಗಳು ಅಂದ್ರೆ ಅಚ್ಚುಮೆಚ್ಚು.. ಕಳೆದ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಯುವರತ್ನ ಶೂಟಿಂಗ್ ನಲ್ಲಿದ್ದ ಪವರ್ ಸ್ಟಾರ್ ಅವರನ್ನ ಆಗಷ್ಟೆ ಮದುವೆಯಾದ ಯುವ ಜೋಡಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ರು.. ಅದು ನಿಮಗು ಗೊತ್ತೆ ಇದೆ…

ಈಗ ಪವರ್ ಸ್ಟಾರ್ ತಮ್ಮ ಮಹಿಳಾ ಅಭಿಮಾನಿಯೊಬ್ಬರ ಮದುವೆಗೆ ಉಡುಗೊರೆಯಾಗಿ ಬೆಳ್ಳಿ ನಾಣ್ಯವೊಂದನ್ನ ಕಳುಹಿಸಿ ಕೊಟ್ಟಿದ್ದಾರೆ.. ಚಿತ್ರದುರ್ಗದ ನಿವಾಸಿಯಾಗಿರೋ ತಾರಾದೇವಿ ಅವರು ಅಪ್ಪಟ್ಟ ಅಪ್ಪು ಫ್ಯಾನ್.. ಅವರ ಚಿತ್ರಗಳನ್ನ ನೋಡುತ್ತ ಬೆಳೆದ ಇವರಿಗೆ ಪುನೀತ್ ಅಂದ್ರೆ ಪಂಚಪ್ರಾಣ.. ಇನ್ನು ತನ್ನ ನೆಚ್ಚಿನ ಮಹಿಳ ಅಭಿಮಾನಿಯ ಮದುವೆ ವಿಚಾರ ತಿಳಿದು ಅವರಿಗೆ ಬೆಳ್ಳಿ ನಾಣ್ಯವನ್ನ ಕಳಿಸಿಕೊಟ್ಟಿದ್ದಾರೆ ಈ ದೊಡ್ಮನೆ ಮಗ..

ಒಂದು‌ಕಡೆ ಚಿತ್ರೀಕರಣ ಮತ್ತೊಂದು ಕಡೆ ಕಿರುತೆರೆಯಲ್ಲಿ ಬ್ಯೂಸಿಯಾಗಿರುವ ಅಪ್ಪು ಅಭಿಮಾನಿಯ  ಈ ಶುಭ ಸಂದರ್ಭವನ್ನ ಮರೆಯದೆ ಸ್ಪಂದಿಸುವ ಮೂಲಕ ಅವರ ಖುಷಿಯಲ್ಲಿ ತಾವು ಪಾಲುದಾರನಾಗಿರುವುದು ಎಲ್ಲರು ಮೆಚ್ಚುವ ಸಂಗತಿ..

Comments

comments

Similar Articles

Top