ಜುಲೈ 12 ರಿಂದ ಶುರುವಾಗಲಿದೆ 3 ಮುದ್ದಾದ ಹುಡುಗಿಯರ ‘ಯಾನ’

ಹದಿಹರೆಯದ ಹುಡುಗಿಯರ ಲೈಫ್ ಹೇಗಿರುತ್ತೆ..? ಹರಯದಲ್ಲಿ ಏನೆಲ್ಲ ಎಡವಟ್ಟುಗಳಾಗುತ್ತೆ ಎಂಬ ಇಂಟ್ರೆಸ್ಟಿಂಗ್ ಅಂಶಗಳನ್ನ ಇಟ್ಟುಕೊಂಡು ಇದೇ ಜುಲೈ 12ಕ್ಕೆ ತೆರೆಗೆ ಬರಲು ಸಿದ್ದವಾಗಿರುವ ಸಿನಿಮಾಯಾನ‘.. ಹಿರಿಯ ನಟ ಜೈ ಜಗದೀಶ್ ಹಾಗು ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ಮೂರು ಪುತ್ರಿಯರಾದ ವೈನಿಧಿ, ವೈಭವಿ, ವೈಸಿರಿ ಅವರೇ ಈ ಸಿನಿಮಾದ ನಾಯಕಿಯರಾಗಿದ್ದಾರೆ..

ಯಾನ ಮೂಲಕ ಜೈ ಜಗದೀಶ್ ದಂಪತಿಗಳ ಮಕ್ಕಳು ಸಿನಿ ರಂಗಕ್ಕೆ ಪರಿಚಯವಾಗುತ್ತಿದ್ದಾರೆ.. ಯಾನದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಕೂಡ ಇದೆ.. ಹಿರಿಯ ನಟರಾದ ಅನಂತ್ ನಾಗ್, ರಾಮಕೃಷ್ಣ, ಸುಹಾಸಿನಿ ಇದ್ರೆ, ಕಾಮಿಡಿ ಕಿಕ್ ನೀಡೋಕೆ ಚಿಕ್ಕಣ್ಣ, ಸಾಧುಕೋಕಿಲಾ, ಶಿವರಾಜ್ ಕೆ.ಆರ್. ಪೇಟೆ ಹಾಗು ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದಾರೆ..

ಈಗೀನ ಯೂಥ್ ಲೈಫ್ ಸ್ಟೈಲ್, ಲವ್ ಕಹಾನಿಗಳ ಸುತ್ತ ಒಂದೊಳ್ಳೆ ಮಸೇಜ್ ನ ಜೊತೆ ಜೊತೆಗೆ, ಸಿನಿ ರಸಿಕರಿಗೆ ಸಖತ್ ಮನರಂಜನೆ ನೀಡುವ ಲಕ್ಷಣ ಕಾಣುತ್ತಿದ್ದು, ಚಿತ್ರದ ಟ್ರೇಲರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.. ರಾಕಿಂಗ್ ಸ್ಟಾರ್ ಯಶ್ ಯಾನ ಟ್ರೇಲರ್ ಅನ್ನ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.. ಜೋಶ್ವಾ ಶ್ರೀಧರ್ ಸಂಗೀತಯಾನದ ರಂಗನ್ನ ಮತ್ತಷ್ಟು ಹೆಚ್ಚಿಸಿದ್ರೆ, ಅನೂಪ್ ಸಿಳೀನ್ ಹಿನ್ನೆಲೆ ಸಂಗೀತದಲ್ಲಿ ಸಿನಿಮಾ ಸೌಂಡ್ ಮಾಡಲಿದೆ

ವಿಜಯ್ ಲಕ್ಮ್ಷಿ ಸಿಂಗ್ ಅವರೇ ಯಾನ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಆಕ್ಮೆ ಮೂವೀಸ್ ಇಂಟರ್ ನ್ಯಾಷನಲ್ ಬ್ಯಾನರ್ ನ ಅಡಿ ಹರೀಶ್ ಶೇರೆಗಾರ್ ನಿರ್ಮಾಣ ಮಾಡಿದ್ದಾರೆ.. ಟ್ರೇಲರ್ ನೋಡುಗರ ಕುತೂಹವನ್ನ ಕೆರಳಿಸುತ್ತಿದ್ದು, ಇದೇ ತಿಂಗಳ 12 ಕ್ಕೆ ಯಾನದ ಅಸಲಿ ಪಯಣ ಶುರುವಾಗಲಿದೆ..

Comments

comments

Similar Articles

Top