ಶಬರಿಯಂತೆ ಕಾದ ಅಭಿಮಾನಿ ದೇವರಿಗೆ ಅಪ್ಪು ದರ್ಶನ.. ವಿಡಿಯೋ ನೋಡಿ..

ಡಾ.ರಾಜ್ ಕುಮಾರ್ ಕುಟುಂಬ ಎಂದಿಗೂ ಅಭಿಮಾನಿಗಳನ್ನ ದೇವರ ರೂಪದಲ್ಲಿ ನೋಡುತ್ತ ಬಂದಿದೆ. ಇದು ಅಣ್ಣಾವ್ರು ತನ್ನ ಕುಟುಂಬಕ್ಕೆ ಹೇಳಿಕೊಟ್ಟ ಹಾಗು ಬಿಟ್ಟು ಹೋದ ದೊಡ್ಡ ಕಾಣಿಕೆಗಳಲ್ಲಿ ಒಂದು. ಕರುನಾಡು ಕೂಡ ಅಣ್ಣಾವ್ರ ಕುಟುಂಬವನ್ನ ಅಷ್ಟೇ ಪ್ರೀತಿ ವಿಶ್ವಾಸ ಆತ್ಮೀಯತೆಯಿಂದ‌ ಕಾಣುತ್ತಿದೆ. ಇಡೀ ಕುಟುಂಬವೆ ಅಭಿಮಾನಿಗಳ ಕಷ್ಟ ಸುಖದಲ್ಲಿ‌ ಜೊತೆ ನಿಂತು ಅಭಯ ನೀಡುವ ಕೆಲಸ ಮಾಡುತ್ತ ಬಂದಿದೆ.

ಸದ್ಯ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೊಡಗು ದೇವ್ರು ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತನ್ನ ನೆಚ್ಚಿನ ಅಭಿಮಾನಿ ಕುಟುಂಬವನ್ನ ಭೇಟಿಯಾಗಿ ಅವರ ಆಸೆಯನ್ನ ಈಡೇರಿಸಿದ್ದಾರೆ. ಉತ್ತರ ಕರ್ನಾಟಕದ ಅಪ್ಪಟ ಅಪ್ಪು ಫ್ಯಾನ್ ತನ್ನ ಇಡೀ ಕುಟುಂಬ ಕಷ್ಟದಲ್ಲಿ ಇದ್ರೂ, ಪವರ್ ಸ್ಟಾರ್ ರಂತೆ ಸ್ಟೆಂಟ್ ಗಳನ್ನ ಕಲಿತು ಅವರ ಮುಂದೆ ತನ್ನ ಕಲೆಯನ್ನ ಪ್ರದರ್ಶನ ಮಾಡುವ ಆಸೆಯನ್ನ ಹೊಂದಿದ್ದಾರೆ.

ಕಡು ಬಡತನದಲ್ಲೂ ಸಾಹಸ ಕಲೆಯನ್ನ ಕರಗತ ಮಾಡಿಕೊಂಡ ಅಭಿಮಾನಿಗೆ, ದೊಡ್ಡಮನೆ ಮಗನನ್ನ ಕಾಣುವ ಅವಕಾಶ ಒದಗಿ ಬಂದಿದೆ. ತನ್ನ ಅಭಿಮಾನಿಯ ಆಸೆಯನ್ನ ಈಡೇರಿಸಿದ ಪವರ್ ಸ್ಟಾರ್ ಆತನ ಇಡೀ ಕುಟುಂಬವನ್ನ ಭೇಟಿಯಾಗಿದ್ದಾರೆ. ಶೂಟಿಂಗ್ ಸೆಟ್ ನಲ್ಲಿ ತನ್ನ ನೆಚ್ಚಿನ ನಟನ ಮುಂದೆ ಆತ ಸ್ಟೆಂಟ್ ಮಾಡುವ ಮೂಲಕ ಅಪ್ಪು ಅವರ ಮನಗೆದ್ದಿದ್ದಾನೆ‌. ಅದರ ಪ್ರೊಮೊ ಈಗ ವೈರಲ್ ಆಗಿದ್ದು, ಸಾಕಷ್ಟು ಕುತೂಹಲವನ್ನ ಮೂಡಿಸಿದೆ.

Comments

comments

Similar Articles

Top