ರೋಚಕ ತಿರುವಿನಲ್ಲಿ ‘ಲಕ್ಷ್ಮೀಬಾರಮ್ಮ’. ತಾಳಿ ಕಟ್ಟುವ ಸಮಯದಲ್ಲಿ ಗೊಂಬೆಗೆ ಬಂದೇಬಿಡ್ತು ಹಳೆ-ನೆನಪು. ವೀಡಿಯೋ ನೋಡಿ..

ಕಲರ್ಸ್ ಕನ್ನಡ ವಾಹಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ, ಮಹಿಳಾಮಣಿಗಳ ಮನಸ್ಸು ಗೆದ್ದಿದೆ. ಪ್ರತಿ ದಿನ 7.30ಕ್ಕೆ ಆಯ್ತು ಅಂದ್ರೆ ಸಾಕು ಹೆಣ್ಣು ಮಕ್ಕಳು ಟಿವಿ ಮುಂದೆ ಹಾಜರ್!. ಸಾಕಷ್ಟು ಕುತೂಹಲ ಮೂಡಿಸಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮುಖ್ಯ ಪಾತ್ರಧಾರಿ ಈ ಗೊಂಬೆ.

ಕೆಲವು ತಿಂಗಳ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ನಿರ್ವಹಿಸುತ್ತಿದ್ದ ನಟಿ ನೇಹಾ ಗೌಡ ಕಿಡ್ನಾಪ್ ಆಗಿದರು. ಆದರೆ ಮತ್ತೆ ಗೊಂಬೆ ಸಿಕ್ಕಿದ್ಮೇಲೆ, ಗೊಂಬೆಗೆ ಹಿಂದಿನ ನೆನಪುಗಳು ಇರುವುದಿಲ್ಲ. ಎಲ್ಲರು ಆಕೆಗೆ ಹಿಂದಿನ ದಿನಗಳು, ಘಟನೆ ನೆನಪಿಸುವ ಪ್ರಯತ್ನ ಮಾಡಿದರೂ ಎಲ್ಲವೂ ವಿಫಲವಾಯಿತು. ಆದರೆ ಈಗ ಈ ಧಾರಾವಾಹಿಯಲ್ಲಿ ರೋಚಕ ತಿರುವು ಸಿಕ್ಕಿದೆ.

ಇಷ್ಟುದಿನ ನೀವೆಲ್ಲರೂ ಕಾಯ್ತಿದ್ದ ಟೈಮ್ ಬಂದೇ ಬಿಡ್ತು.  ಎಲ್ಲರನ್ನು ಮರೆತು ಹೋಗಿದ್ದ ಗೊಂಬೆಗೆ ತಾಳಿ ಕಟ್ಟುವ ಸಮಯದಲ್ಲಿ ಬಂದೇ ಬಿಡ್ತು ಹಳೆ ನೆನಪು. ಬೇರೆಯೊಂದು ಮದುವೆ ಮಾಡಿಕೊಳ್ಳುತ್ತಿರುವ ಗೊಂಬೆ, ತಾಳಿಯನ್ನು ಕಿತ್ತು, ಚಂದು ಬಳಿ ಓಡಿ ಹೋಗುವ ದೃಶ್ಯ ಇಂದಿನ ಸಂಚಿಕೆಯ ಪ್ರೊಮೋದಲ್ಲಿ ವೀಕ್ಷಿಸಬಹುದು. ಮುಂದೆ ಏನಾಗುತ್ತೆ ಎಂಬುದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ. ಒಟ್ಟಾರೆ ರೋಚಕ ತಿರುವಿನಲ್ಲಿದೆ ‘ಲಕ್ಷ್ಮೀಬಾರಮ್ಮ’ ಧಾರಾವಾಹಿ.

Comments

comments

Similar Articles

Top