ಪ್ರಕೃತಿ ಮಡಿಲಲ್ಲಿ ಆಶಿಕಾ ರಂಗನಾಥ್ ಸಹೋದರಿಯ ‘ಅಂದವಾದ’ ಹಾಡಿನ ವೈಯಾರ..

ಸ್ಯಾಂಡಲ್ ವುಡ್ ನಲ್ಲಿ ಹೊಸಬರ ಚಿತ್ರಗಳು ಹೆಚ್ಚಾಗುತ್ತಿವೆ, ಹೊಸ ಹೊಸ ಪ್ರಯತ್ನಗಳು, ಹೊಸ ಹೊಸ ಕಥೆಗಳು, ಹೊಸ ಹೊಸ ಪ್ರತಿಭೆಗಳು ಬರುತ್ತಿದ್ದಾರೆ. ಹೊಸತನದೊಂದಿಗೆ ಜನರ ಮನಸ್ಸು ಗೆಲ್ಲುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇದೀಗ ಇಂತಹದೇ ಹೊಸಬರ ತಂಡವೊಂದು ಹೊಸ ಸಿನಿಮಾದೊಂದಿಗೆ ಲಗ್ಗೆ ಇಟ್ಟುತ್ತಿದ್ದಾರೆ‌. ಅದೇ ಅಂದವಾದ..

ಅಂದವಾದ ಚಿತ್ರಕ್ಕೆ ಯುವನಟ ಜೈ ನಾಯಕ, ಇನ್ನು ಅನುಷಾ ರಂಗನಾಥ್ ನಾಯಕ ನಟಿ. ನಟಿ ಅನುಷಾ ಬೇರೆ ಯಾರು ಅಲ್ಲ ಸ್ಯಾಂಡಲ್ ವುಡ್ ಕ್ಯೂಟ್ ನಟಿ ಅಶ್ಮಿಕಾ ರಂಗನಾಥ್ ಅವರ ಸಹೋದರಿ, ಈ ಹಿಂದೆ ಅನುಷಾ ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ ಅನ್ನೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದರು. ಇದೀಗ ಕೊಂಚ ಗ್ಯಾಪ್ ನಂತರ ಮತ್ತೆ ಅಂದವಾದ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಯುವ ಪ್ರತಿಭೆ ಚಲ ಅಂದವಾದ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ ಸಂಯೋಜಿಸಿದ್ದು, ಹರೀಶ್ ಎನ್ ಸೊಂಡೆಕೊಪ್ಪ ಛಾಯಾಗ್ರಹಣವಿದೆ. ವಿಜಯ್ ಪ್ರಕಾಶ್ ಧನಿ ಈಗಾಗ್ಲೇ ಎರಡು ಲಿರಿಕಲ್ ವಿಡಿಯೋಗಳನ್ನ ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಅಂದವಾದ ಟೈಟಲ್ ಹಾಡಿನ ವಿಡಿಯೋ ವರ್ಶನ್ ಕೂಡ ರಿಲೀಸ್ ಮಾಡಿದೆ.. ಒಟ್ಟಿನಲ್ಲಿ ಹೊಸತನದೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಅಂದವಾದ ಚಿತ್ರ, ಸಾಕಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದೆ.

Comments

comments

Similar Articles

Top