ನಟನೆ ಹಾಗೂ ನಿರೂಪಣೆ ನಂತರ ಮತ್ತೊಂದು ಸಾಹಸಕ್ಕೆ ಕೈ ಹಾಕುತ್ತಿದ್ದಾರೆ ಪವರ್ ಸ್ಟಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಬರೀ ನಟನಾಗಿ ಮಾತ್ರ ತಮ್ಮನ್ನ ತಾವು ಉಳಿಸಿಕೊಂಡಿಲ್ಲ.. ಈಗ ತಾವೇ ಒಂದು ಸಿನಿಮಾ ನಿರ್ಮಾಣ ಸಂಸ್ಥೆಯನ್ನ ಹುಟ್ಟು ಹಾಕಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಪ್ರಯೋಗಾತ್ಮಕ ಹಾಗು ಕಮರ್ಷಿಯಲ್ ಎರಡು ಅಂಶಗಳನ್ನು ಒಳಗೊಂಡಿರುವ ಚಿತ್ರಗಳನ್ನ ಚಿತ್ರ ರಸಿಕರಿಗೆ ನೀಡುತ್ತಿದ್ದಾರೆ…

ಈಗಾಗ್ಲೇ ತೆರೆಕಂಡ ಮೊದಲ ನಿರ್ಮಾಣದ ಸಿನಿಮಾ ಕವಲುದಾರಿ ಎಲ್ಲ ವರ್ಗದ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನ ಪಡೆದುಕೊಂಡಿದೆ.. ಹೀಗಾಗೆ ಪವರ್ ಸ್ಟಾರ್ ಖುಷಿಯಾಗಿದ್ದಾರೆ.. ಜೊತೆಗೆ ತಮ್ಮ ಪಿಆರ್ಕೆ ಆಡಿಯೋ ಸಂಸ್ಥೆಯ ಮೂಲಕ ಹಲವು ಚಿತ್ರಗಳ ಆಡಿಯೋವನ್ನ ಹೊರ ತಂದಿದ್ದಾರೆ.. ಅಪ್ಪು ಕೈ ಹಾಕಿದ ಈ ಎರಡು ಕ್ಷೇತ್ರಗಳಲ್ಲಿ ಯಶಸ್ಸು ಪಡೆದುಕೊಂಡಿದ್ದು ತಮ್ಮ ಚಿತ್ರರಂಗದ ಮೇಲಿನ ಪ್ರೀತಿಯನ್ನ ಮತ್ತಷ್ಟು ದೊಡ್ಡದಾಗಿಸುವ ಯೋಚನೆ ಮಾಡಿದ್ದಾರೆ…

ಹೌದು, ಪವರ್ ಸ್ಟಾರ್ ತಮ್ಮದೇ ನಿರ್ಮಾಣ ಸಂಸ್ಥೆಯ ಜೊತೆಗೆ ಸಿನಿಮಾ ವಿತರಣೆಯಲ್ಲು ತೊಡಗಿಕೊಳ್ಳುವ ಇಂಗಿತವನ್ನ ವ್ಯಕ್ತ ಪಡೆದಿದ್ದಾರೆ.. ಆಡಿಯೋ ಸಂಸ್ಥೆಯಾಯ್ತು, ನಿರ್ಮಾಣ ಸಂಸ್ಥೆಯಾಯ್ತು ಮುಂದೇನು ಎಂದು ಪ್ರಶ್ನೆ ಮಾಡಿದ ಮಾಧ್ಯಮದವರಿಗೆ, ಮುಂದಿನ ದಿನಗಳಲ್ಲಿ ಸಿನಿಮಾ ವಿತರಣೆಯನ್ನ ಮಾಡುವ ಯೋಚನೆ ಇದ್ದು ಆ ಬಗ್ಗೆ ಚಿಂತಿಸುವುದಾಗಿ ಹೇಳಿದ್ದಾರೆ…

ಅಂದಹಾಗೆ ನಾಳೆಯಿಂದಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಪ್ರಸಾರವಾಗಲ್ಲಿದ್ದು, ಈ ಕಾರ್ಯಕ್ರಮ ಕಿರುತೆರೆಯಲ್ಲಿ ಮತ್ತೊಮ್ಮೆ ದೊಡ್ಡ ಸಂಚಲನ ಉಂಟು ಮಾಡುವ ಸಾಧ್ಯತೆಗಳಿದ್ದು, ಕೋಟಿ ಗೆಲ್ಲುವ ಕನ್ನಡಿಗ ಈ ಬಾರಿಯ ಕಾರ್ಯಕ್ರಮದಲ್ಲಿ ಸಿಗ್ತಾರ ಅನ್ನೋದನ್ನ ಕಾದು ನೋಡಬೇಕಿದೆ..

Comments

comments

Similar Articles

Top