ಅಪ್ಪನಂತೆ ಪುತ್ರಿ ಕೂಡ ಅಪ್ಪಟ್ಟ ಬಂಗಾರ. ಚಿಕ್ಕ ವಯಸ್ಸಿನಲ್ಲಿ ಅಪ್ಪು ಪುತ್ರಿ ದಿಟ್ಟ ನಿರ್ಧಾರ..

ದೊಡ್ಡ ಮನೆ ಕುಟುಂಬ ಹಿಂದಿನಿಂದಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಡಾ.ರಾಜಕುಮಾರ್ ಕಣ್ಣುಗಳನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾದರು. ಇನ್ನು ಅವರ ಮಕ್ಕಳು ಕೂಡ ದೇಹ ದಾನ ಮಾಡಲಿದ್ದಾರೆ. ಇಂತಹ ಕುಟುಂಬದಿಂದ ಬಂದ ಹುಡುಗಿ ಕೂಡ ಇಂತಹದೇ ಮಹತ್ವದ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯುವ ಜನಾಂಗಕ್ಕೆ ಸ್ಪೂರ್ತಿಯಾದರೆ, ಇನ್ನು ತಂದೆಯ ಹಾದಿಯನ್ನೇ ಹಿಡಿಯುವ ಎಲ್ಲಾ ಲಕ್ಷಣಗಳು ಅವರ ಮಕ್ಕಳಲ್ಲಿ ಕಂಡುಬರುತ್ತಿದೆ. ಪುನೀತ್ ರಾಜಕುಮಾರ್ ಪುತ್ರಿ ಚಿಕ್ಕ ವಯಸ್ಸಿನಲ್ಲಿ ಮಹತ್ತರವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಹೌದು, ಅಪ್ಪು ಹಿರಿಯ ಪುತ್ರಿ ಸಮಾಜ ಸೇವೆಗೆ ಮುಂದಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ಹಿರಿಯ ಪುತ್ರಿ ‘ಧೃತಿ ಪುನೀತ್ ರಾಜ್‌ಕುಮಾರ್’ ಕಣ್ಣಿನ ಸಮಸ್ಯೆ ಎದುರಿಸುತ್ತಿರುವ ವಯಸ್ಸಾದವರಿಗೆ ನೆರವು ನೀಡಲು ಅಭಿಯಾನವನ್ನು ಶುರು ಮಾಡಿದ್ದಾರೆ. ಇದಕ್ಕೆ ಯಾರು ಬೇಕಾದರೂ ಹಣ ಸಹಾಯ ಮಾಡಬಹುದು. ಅದರಿಂದ ಬಂದ ಹಣವನ್ನು ಕಣ್ಣಿನ ಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಅಪ್ಪು ಪುತ್ರಿ ಧೃತಿ ಭರಿಸಲಿದ್ದಾರಂತೆ. ಈ ಮೂಲಕ ಅತಿ ಚಿಕ್ಕ ವಯಸ್ಸಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ ರಾಜ್ ಮೊಮ್ಮಗಳು ಧೃತಿ.

Comments

comments

Similar Articles

Top