ಕನ್ನಡದ ಕೋಟ್ಯಾಧಿಪತಿ ಒಂದೆ ಅಲ್ಲ, ಅಪ್ಪು ಸಾರಥ್ಯದಲ್ಲಿ ಬರಲಿದೆ ಇನ್ನು ಮೂರು ಶೋಗಳು.!!

ಪವರ್ ಸ್ಟಾರ್ ನ ಫ್ಯಾಮಿಲಿ ಪವರ್ ನ ಬಳಿಕ ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.. ಇದೇ ಶನಿವಾರದಿಂದ ಬಹು ನಿರೀಕ್ಷಿತ ಕನ್ನಡದ ಕೋಟ್ಯಾಧಿಪತಿ ಪ್ರೋಗ್ರಾಂ ಶುರುವಾಗ್ತಿದೆ.. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಪ್ರೆಸ್ ಮೀಟ್ ಕೂಡ ಆಯೋಜಿಸಲಾಗಿತ್ತು.. ಇದರಲ್ಲಿ ಅಪ್ಪು ಈ ಸ್ವಾರಸ್ಯಕರ ವಿಚಾರವನ್ನ ಬಿಚ್ಚಿಟ್ಟಿದ್ದಾರೆ..

ಕಲರ್ಸ್ ಕನ್ನಡ ವಾಹಿನಿಯೊಂದಿಗೆ ಪವರ್ ಸ್ಟಾರ್ 5 ಕಾರ್ಯಕ್ರಮಗಳ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.. ಈಗಾಗ್ಲೇ ಫ್ಯಾಮಿಲಿ ಪವರ್ ಷೋ ಮೂಲಕ ರಂಜಿಸಿಯಾಗಿದೆ.. ಇನ್ನೇನಿದ್ರು ಕೋಟ್ಯಾಧಿಪತಿಯ ಅಧಿಪತಿ ಸೀಟ್ ನಲ್ಲಿ ಕೂತ ಯುವರತ್ನನನ್ನ ನೋಡಬೇಕು ಅಷ್ಟೆ..

ಇದಾದ ಮೇಲೆ ಇದೇ ವಾಹಿನಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ನಿರೂಪಣೆಯಲ್ಲಿ ಮತ್ತೆ ಮೂರು ಕಾರ್ಯಕ್ರಮಗಳು ಮೂಡಿ ಬರಲಿವೆ.. ಸದ್ಯ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಪವರ್ ಸ್ಟಾರ್ ಕಿರುತೆರೆಗು ಸಮಯವನ್ನ ತೆಗೆದಿಟ್ಟಿದ್ದಾರೆ.. ಆದರೆ ಟಿವಿ ರಿಯಾಲಿಟಿ ಶೋಗಳ ನಡುವೆ ಅಂತರವನ್ನ ಕಾಯ್ದುಕೊಳ್ಳುವ ಸಲುವಾಗಿ ಹಾಗು ತಮ್ಮ ಸಿನಿಮಾಗಳ ಬಗ್ಗೆ ಕಾಳಜಿ ವಹಿಸುವ ಸಲುವಾಗಿ ಒಂದು ಶೋ ಆದ ಬಳಿಕ ಮೂರ್ನಾಲ್ಕು ತಿಂಗಳ ಗ್ಯಾಪ್ ಪಡೆದು ಮತ್ತೆ ವಾಪಸ್ ಆಗುವ ಭರವಸೆ ನೀಡಿದ್ದಾರೆ

ಸದ್ಯ ಕನ್ನಡದ ಕೋಟ್ಯಾಧಿಪತಿಯ ಹಲವು ಸಂಚಿಕೆಗಳ ಚಿತ್ರೀಕರಣ ಸಹ ಮುಗಿದೆ.. ಇದರ ಜೊತೆಗೆ ಯುವರತ್ನ ಶೂಟಿಂಗ್ ಸಾಗಿದ್ದು, ಈ ಸಿನಿಮಾ ಮುಗಿಯುತ್ತಿದ್ದ ಹಾಗೆ ಚೇತನ್ ನಿರ್ದೇಶನದ ಜೇಮ್ಸ್ ಚಿತ್ರಕ್ಕೆ ಅಪ್ಪು ಅವರು ರೆಡಿಯಾಗಲ್ಲಿದ್ದಾರೆ.. ಈ ಎಲ್ಲದರ ನಡುವೆ ಬಿಡುವು ಮಾಡಿಕೊಂಡು ಕಿರುತೆರೆ ವೀಕ್ಷಕರನ್ನ ಕೂಡ ರಂಜಿಸಲ್ಲಿದ್ದಾರೆ..

Comments

comments

Similar Articles

Top