ಕನ್ನಡದ ಕೋಟ್ಯಧಿಪತಿ ಶೋ ಮಾಡಲು ಕಾರಣ ಈ ವ್ಯಕ್ತಿ ಎಂದ ಪುನೀತ್..!!

ಕನ್ನಡದ ಕೋಟ್ಯಧಿಪತಿಯ ಕಾರ್ಯಕ್ರಮದ ಮತ್ತೊಂದು ಆವೃತ್ತಿ ಇನ್ನೆನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಕೋಟ್ಯಧಿಪತಿ, ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ. ಬಾಲಿವುಡ್‌ನ ಖ್ಯಾತ ನಟ ಆಮಿತಬ್ ಬಚ್ಚನ್ ಸಾರಥ್ಯದಲ್ಲಿ ಮೊದಲ ಶುರುವಾಗಿದ್ದು ಹಿಂದಿಯಲ್ಲಿ. ನಂತರ ಕನ್ನಡದಲ್ಲಿ ಅಪ್ಪು ಸಾರಥ್ಯದಲ್ಲಿ ನಡೆದುಕೊಂಡು ಬಂದಿದೆ.

ಆದರೆ ಕಾರಣಾಂತರಗಳಿಂದ ಕೋಟ್ಯಧಿಪತಿ ಎರಡು ಸೀಸನ್ ಗಳ ನಂತರ ಅಪ್ಪು ಮೂರನೇ ಸೀಸನ್ ನಿಂದ ಹೊರ ಬಂದಿದ್ರು. ಆದರೆ ಇದೀಗ ಮತ್ತೆ ಕೋಟ್ಯಧಿಪತಿ ಸೀಸನ್ 4ರ ಮೂಲಕ ಕಿರುತೆರೆಗೆ ವಾಪಸ್ ಆಗಿದ್ದಾರೆ. ಈ ಸಂದರ್ಭದಲ್ಲಿ ಅಪ್ಪುಗೆ ಕೋಟ್ಯಧಿಪತಿ ಕಾರ್ಯಕ್ರಮ ಮಾಡಲು ಯಾರು ಸ್ಪೂರ್ತಿ ಹಾಗೂ ಯಾರಿಗಾಗಿ ಈ ಕಾರ್ಯಕ್ರಮ ಮಾಡಲು ನಿರ್ಧರಿಸಿದರು ಎಂಬುದನ್ನು ಹೇಳಿಕೊಂಡಿದ್ದಾರೆ.

ಹಿಂದಿಯಲ್ಲಿ ಪ್ರಸಾರವಾಗುತ್ತಿದಕೌನ್ ಬನೇನಾ ಕರೋಡ್ ಪತಿಕಾರ್ಯಕ್ರಮವನ್ನು ಡಾ.ರಾಜಕುಮಾರ್ ಮೀಸ್ ಮಾಡದೇ ನೋಡುತ್ತಿದ್ದರ0ತೆ, ಇದು ಅವರಿಗೆ ಬಹಳ‌ ಅಚ್ಚುಮೆಚ್ಚಿನ ಕಾರ್ಯಕ್ರಮ ಕೂಡ ಅಂತೆ. ಹೀಗಾಗಿ ಅಪ್ಪು ಕನ್ನಡ ಕೋಟ್ಯಧಿಪತಿ ಕಾರ್ಯಕ್ರಮ ನಡೆಸಿಕೊಡುವುದರಿಂದ ಅಪ್ಪಾಜಿ ಅವರಿಗೆ ಗೌರವ ಸಲ್ಲಿದಂತೆ ಆಗುತ್ತೆ ಎಂಬ ಕಾರಣಕ್ಕೆ ಕೋಟ್ಯಧಿಪತಿ ಕಾರ್ಯಕ್ರಮ ಮಾಡಲು ಪ್ರೇಕ್ಷಕರ ಮುಂದೆ ಬಂದಿರುವುದಾಗಿ ಅಪ್ಪು ತಿಳಿಸಿದರು.

Comments

comments

Similar Articles

Top