ಕೋಟ್ಯಧಿಪತಿ ಶೋ ಮಾಡಲು ಭಯಪಟ್ಟ ಸಂದರ್ಭದಲ್ಲಿ ಧೈರ್ಯ ನೀಡಿದ್ದು ನನ್ನ ತಾಯಿ – ಅಪ್ಪು

ಇದೇ ಶನಿವಾರದಿಂದ ಮತ್ತೊಮ್ಮೆ ವೀಕೆಂಡ್ ಮಸ್ತಿಯನ್ನ ಹೆಚ್ಚಿಸಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡದ ಕೋಟ್ಯಾಧಿಪತಿ ಷೋಗೆ ವಾಪಸ್ ಆಗಿದ್ದಾರೆ.. ಕಳೆದ ಸೀಸನ್ ಅಪ್ಪು ಅವರಿಲ್ಲದೇ ಅಷ್ಟೇನು ಸದ್ದು ಮಾಡದ ಕೋಟ್ಯಾಧಿಪತಿ ಷೋ ಈಗ ಮತ್ತೆ ಪುನೀತ್ ಅವರ ಕೈ ಸೇರಿದ್ದು, ಹೊಸ ಹುರುಪಿನೊಂದಿಗೆ ಕಾರ್ಯಕ್ರಮ ನಡೆಸಿಕೊಡಲು ಸಿದ್ದರಾಗಿದ್ದಾರೆ..

ಇನ್ನೂ ತಾನು ಹಾಗು ಅಪ್ಪಾಜಿ ಕೂಡ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದ ಇದೇ ಕಾರ್ಯಕ್ರಮದ ಅಭಿಮಾನಿಗಳಾಗಿದ್ದೆವು.. ಆಗ ಈ ಷೋವನ್ನ ಮಿಸ್ ಮಾಡದೆ ನೋಡುತ್ತಿದ್ದೆ.. ಆನಂತರ ಈ ಕಾರ್ಯಕ್ರಮ ಕನ್ನಡದಲ್ಲಿ ಶುರುವಾಗಲು ಹೊರಟಾಗ ನನ್ನ ಆಯ್ಕೆ ಮಾಡಲಾಗಿತ್ತು.. ಅಮಿತಾಭ್ ಬಚ್ಚನ್ ರಂತಹ ದಿಗ್ಗಜ ನಟರು ನಡೆಸಿಕೊಟ್ಟ ಕಾರ್ಯಕ್ರಮವನ್ನ ನಾನು ಹೇಗೆ ಮಾಡೋದು ಎಂಬ ಭಯ ನನ್ನ ಕಾಡಿತ್ತು..

ಆದರೆ ನನ್ನ ತಾಯಿ ನನಗೆ ಮೊದಲ ಧೈರ್ಯ ನೀಡಿದ್ರು.. ನಿನ್ನಿಂದ ಇದು ಸಾಧ್ಯ ಅಂತ ಹೇಳಿದವರು ಮೊದಲಿಗೆ ನನ್ನ ತಾಯಿ.. ಆನಂತರ ನನ್ನ ಸಹೋದರರು ಕೂಡ ನನಗೆ ಧೈರ್ಯ ನೀಡಿದ್ರು.. ಇನ್ನು ರಾಘಣ್ಣ ಈ ಕಾರ್ಯಕ್ರಮದಲ್ಲು ನನ್ನ ಜೊತೆ ಇರ್ತಾರೆ ಎಂದ್ರು ಅಪ್ಪು.. ಇದೇ ಶನಿವಾರ ಹಾಗು ಭಾನವಾರ ಕನ್ನಡ ಕೋಟ್ಯಾಧಿಪತಿ ಕಾರ್ಯಕ್ತಮ ಶುರುವಾಗುತ್ತಿದ್ದು ಯಾರಿಗೆ ಒಲಿಯಲಿದೆ ಕೋಟ್ಯಾಧಿಪತಿಯ ಕಿರೀಟ ಕಾದು ನೋಡಬೇಕು..

Comments

comments

Similar Articles

Top