ವಿಜಯ್ ಪ್ರಕಾಶ್ ಸರಿಗಮಪ ಶೋನಿಂದ ದೂರ ಉಳಿದಿದ್ಯಾಕೆ ಎಂದು ಸತ್ಯ ಬಿಚ್ಚಿಟ್ಟರು.. ಇದೇ ಆ ಕಾರಣ..!

ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಸರಿಗಮಪ ಕಾರ್ಯಕ್ರಮ ಕೂಡ ಒಂದು. ಇನ್ನು ಇತ್ತೀಚಿಗೆ ಅತಿ ಹೆಚ್ಚು ರೇಟಿಂಗ್ ಪಡೆದ ಕಾರ್ಯಕ್ರಮಗಳಲ್ಲಿ ಸರಿಗಮಪ ಮೊದಲ ಸಾಲಿನಲ್ಲಿದೆ. ಸದ್ಯ ಹಂಸಲೇಖ ಅವರ ಸಾರಥ್ಯದಲ್ಲಿ ಚಿಕ್ಕ ಮಕ್ಕಳ ಶೋ ಯಶಸ್ವಿಯಾಗಿ ಸಾಗುತ್ತಿದೆ. ಈ ಸಂದರ್ಭದಲ್ಲಿ ಒಬ್ಬರ ಅನುಪಸ್ಥಿತಿ ಪ್ರೇಕ್ಷಕರನ್ನ ಕಾಡುತ್ತಿತ್ತು.

ಹೌದು, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ತ್ರಿಮೂರ್ತಿಗಳಂತೆ ಒಟ್ಟಿಗೆ ಜಡ್ಜ್ ಸೀಟ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಐದು ಸಂಚಿಕೆಯಿಂದ ವಿಜಯ್ ಪ್ರಕಾಶ್ ಕಾಣೆಯಾಗಿದ್ದರು. ಸರಿಗಮಪ ಕಾರ್ಯಕ್ರಮದ ಕೇಂದ್ರ ಬಿಂದುವಾಗಿರುವ ವಿಜಯ್ ಪ್ರಕಾಶ್ ಇಲ್ಲದೆ ಇರುವುದು ವೀಕ್ಷಕರಿಗೆ ಬೇಸರ ಮೂಡಿಸಿತ್ತು.. ಈ ಬಗ್ಗೆ ಸ್ವತಃ ವಿಜಯ್ ಪ್ರಕಾಶ್ ಅವರನ್ನೇ ಕೇಳಿದಕ್ಕೆ ಹೇಳಿದ್ದೇನು ಗೊತ್ತಾ..

ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ವಿಜಯ್ ಪ್ರಕಾಶ್ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಕೆಲವು ದಿನಗಳ ಹಿಂದೆ ನನ್ನ ತಂದೆ ನಿಧನರಾದರು.. ಹೀಗಾಗಿ ಸರಿಗಮಪ ಕಾರ್ಯಕ್ರಮದಿಂದ ಎರಡು ತಿಂಗಳು ದೂರ ಉಳಿದಿದ್ದೆ.. ಇನ್ಮುಂದೆ ಯಾವುದೇ ಕಾರಣಕ್ಕೂ ಈ ಶೋ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ..

Comments

comments

Similar Articles

Top