ಶಸ್ತ್ರಚಿಕಿತ್ಸೆ ಗೆ ಒಳಗಾಗಲಿರುವ ಶಿವಣ್ಣ..!! ಈ ಬಾರಿ ಬರ್ತ್ ಡೇ ಡೌಟ್..!!?

ಜುಲೈ 12 ಬಂತು ಅಂದ್ರೆ ಸಾಕು ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ.. ಅಂದು ತನ್ನ ನೆಚ್ಚಿನ ನಾಯಕನನ್ನ ಹತ್ತಿರದಿಂದ ಕಂಡು ಹುಟ್ಟುಹಬ್ಬದ ಶುಭಾಶಯ ತಿಳಿಸಿ, ನೂರು ಕಾಲ ಸುಖವಾಗಿ ಇರುವಂತೆ ಆಶೀರ್ವಾದ ಮಾಡಿ ಬರುತ್ತಾರೆ..

ಆದರೆ ಈ ಬಾರಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ ಕ್ಕೆ ಅಭಿಮಾನಿಗಳಿಗೆ ಬೇಸವಾಗೋದು ಗ್ಯಾರಂಟಿ.. ಯಾಕಂದ್ರೆ ಶಿವಣ್ಣ ತಮ್ಮ ಹುಟ್ಟುಹಬ್ಬದಂದು ವಿದೇಶದಲ್ಲಿ ಇರ್ತಾರೆ.. ಹೀಗಾಗೆ ಅವರನ್ನ ಭೇಟಿಯಾಗಿ ವಿಶ್ ಮಾಡುವ ಚಾನ್ಸ್ ಈ ಬಾರಿ ಅಭಿಮಾನಿಗಳಿಗೆ ಮಿಸ್ ಆಗಲಿದೆ

ಹೌದು, ಶಿವಣ್ಣ ಜುಲೈ 5 ರಂದೇ ಲಂಡನ್ ಗೆ ತೆರಳಲ್ಲಿದ್ದಾರೆ.. ಇದು ಫ್ಯಾಮಿಲಿ ಟ್ರಿಪ್ಪೋ ಅಥವಾ ಸಿನಿಮಾ ಶೂಟಿಂಗ್ಗೋ ಅಲ್ಲ.. ಬದಲಿಗೆ ಸಣ್ಣದೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಲ್ಲಿದ್ದಾರೆ ಸ್ಯಾಂಡಲ್ ವುಡ್ ನ ಎಸ್ ಆರ್ ಕೆ.. ಕೆಲ ದಿನಗಳಿಂದ ಬಲಭುಜದ ನೋವು ಕಾಣಿಸಿಕೊಳ್ಳುತ್ತಿದ್ದು, ಹೀಗಾಗೆ ಜುಲೈ 8 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲ್ಲಿದ್ದಾರೆ

ಶಸ್ತ್ರಚಿಕಿತ್ಸೆಯ ಬಳಿಕ ಕೆಲ ದಿನಗಳ ಕಾಲ ಲಂಡನ್ ನಲ್ಲೇ ಇದ್ದು ಚೇತರಿಸಿಕೊಂಡು ಮತ್ತೆ ವಾಪಸ್ ಆಗಲ್ಲಿದ್ದಾರೆ ಎಂದು ತಿಳಿದು ಬಂದಿದೆ.. ಹೀಗಾಗೆ ಶಿವಣ್ಣ 57 ಹುಟ್ಟುಹಬ್ಬಕ್ಕೆ ಇರೋದಿಲ್ಲ ಎನ್ನಲಾಗ್ತಿದೆಸದ್ಯ ಧ್ರೋಣ, ಆನಂದ್, ರುಸ್ತುಂ ಮುಗಿಸಿರುವ ಶಿವಣ್ಣ, ಭಜರಂಗಿ-2 ಶೆಡ್ಯೂಲ್ ಮುಗಿಸಿ ಸೀದಾ ಲಂಡನ್ ಫ್ಲೈಟ್ ಹತ್ತಲ್ಲಿದ್ದಾರೆ..

Comments

comments

Similar Articles

Top