ಧವನ್ ಬದಲಿಗೆ ರಿಷಬ್, ಶಂಕರ್,ಶ್ರೇಯಸ್ ಯಾರು ಅಲ್ಲ.. ಟೀಮ್ ಸೇರಲ್ಲಿದ್ದಾರಂತೆ ಈ ಆಟಗಾರ..

ಇಂದು ಟೀಮ್ ಇಂಡಿಯಾ ಹಾಗು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ದಿನ.. ಫಾರ್ಮ್ ನಲ್ಲಿರುವ ಗಬ್ಬರ್ ಸಿಂಗ್ ಶಿಖರ್ ಧವನ್ ತಮ್ಮ ಹೆಬ್ಬೆರಳ ಗಾಯದ ಸಮಸ್ಯೆಯಿಂದ ಇಂದಿನಿಂದ ಮೂರು ವಾರಗಳ ಕಾಲ ತಂಡದಿಂದ ಹೊರಗುಳಿಯಲ್ಲಿದ್ದಾರೆ.. ಈ ಮೂರು ವಾರಗಳಲ್ಲಿ ಟೀಮ್ ಇಂಡಿಯಾ 5 ಮ್ಯಾಚ್ ಗಳನ್ನ ಆಡಲ್ಲಿದ್ದು, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡಿಸ್, ಇಂಗ್ಲೆಂಡ್ ಹಾಗು ಅಫ್ಘಾನಿಸ್ತಾನ ತಂಡದ ವಿರುದ್ದ ಕಣಕ್ಕೆ ಇಳಿಯಬೇಕಿದೆ

ಹೀಗಾಗೆ ರಿಷಬ್ ಪಂತ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳುವಂತೆ ಮಾತುಗಳು ಕೇಳಿಬಂದಿದ್ರು, ರೋಹಿತ್ ಜೊತೆಗೆ ರಾಹುಲ್ ಇನ್ನಿಂಗ್ಸ್ ಆರಂಭಿಸೋದು ಡೌಟ್ ಎನ್ನಲಾಗಿದೆ.. ಏಕೆಂದರೆ ನಾಲ್ಕನೇ ಕ್ರಮಾಂಕದಲ್ಲೇ ರಾಹುಲ್ ರನ್ನ ಮುಂದುವರಿಸಬೇಕಾದ ಅನಿವಾರ್ಯತೆ ಇದ್ದು, 4 ನೇ ಸ್ಥಾನಕ್ಕೆ ರಾಹುಲ್ ಬೆಸ್ಟ್ ಆಯ್ಕೆ ಎನ್ನಲಾಗ್ತಿದೆ.. ಹೀಗಾಗೆ ಪಂತ್ ಆಡಬೇಕಿರುವ ಜಾಗವನ್ನ ಭರ್ತಿ ಮಾಡಲು ದಿನೇಶ್ ಕಾರ್ತಿಕ್,ವಿಜಯ್ ಶಂಕರ್ ತಂಡದಲ್ಲಿದ್ದು, ರೋಹಿತ್ ಜೊತೆಗೆ ಇನ್ನಿಂಗ್ಸ್ ಓಪನ್ ಮಾಡಲು ಅನುಭವಿ ಆಟಗಾರರ ಅವಶ್ಯಕತೆ ಬಗ್ಗೆ ಬಿಸಿಸಿಐ ಮನಗಂಡಿದೆ

ಹೀಗಾಗೆ ಸದ್ಯ ಫಾರ್ಮ್ ನಲ್ಲಿರುವ ಅಜಿಂಕ್ಯಾ ರಹಾನೆಯನ್ನ ಇಂಗ್ಲೆಂಡ್ ಗೆ ಕಳಿಸಿಕೊಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲು ರಹಾನೆಯೇ ಬೆಸ್ಟ್ ಆಯ್ಕೆ ಎಂಬ ಅಭಿಪ್ರಾಯ ಮೂಡಿದೆ.. ಸದ್ಯಕ್ಕೆ ರಹಾನೆ ಆರಂಭಿಕ ಆಟಗಾರನಾಗಿ ತಂಡ ಸೇರಲ್ಲಿದ್ದಾರ ಅನ್ನೋದನ್ನ ಕಾದು ನೋಡ್ಬೇಕು.

Comments

comments

Similar Articles

Top