ಮತ್ತೆ ಮತ್ತೆ ನೋಡಬೇಕೆನಿಸುವ ‘ರತ್ನಮಂಜರಿ’

ಸಿನಿಮಾ ಟಿಕೇಟ್ಗಳನ್ನ ಆನ್ ಲೈನ್ ಬುಕ್ ಮಾಡೋರಿಗೆ ಬುಕ್ ಮೈ ಷೋ ಹೇಳಿ ಮಾಡಿಸಿದ ಜಾಗ.. ಇಲ್ಲಿ ಸಿನಿಮಾಗೆ ಟಿಕೇಟ್ ಬುಕ್ ಮಾಡೋದು ಮಾತ್ರವಲ್ಲ ನೋಡಿದ ಚಿತ್ರದ ಬಗ್ಗೆ ಪ್ರೇಕ್ಷಕರೆ ಸ್ವತಃ ಪಾಸೋ ಫೇಲೊ ಅನ್ನೋದನ್ನ ಒತ್ತಿ ಹೇಳ್ತಾರೆ.. ಹೀಗೆ ಕಳೆದ ಶುಕ್ರವಾರ ತೆರೆ ಕಂಡ ಸಿನಿಮಾ ರತ್ನಮಂಜರಿಗೂ ಪ್ರೇಕ್ಷಕ ಪ್ರಭು ರೇಟಿಂಗ್ ನೀಡಿ ಸಿನಿಮಾಗೆ ಬೆಂಬಲ ನೀಡಿದ್ದಾರೆ.. ಹೌದು ರತ್ನಮಂಜರಿಗೆ ಬುಕ್ ಮೈ ಷೋನಲ್ಲಿ 85% ರೇಟಿಂಗ್ ಲಭ್ಯವಾಗಿದೆ

ಈ ಮೂಲಕವೂ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದ ಕೌತುಕದ ಕಹಾನಿ ಒಂದೊಳ್ಳೆ ಗಳಿಕೆಯೊಂದಿಗೆ ದಿನ ಕಳೆದ ಹಾಗೆ ಯಶಸ್ಸಿನ ಮೆಟ್ಟಿಲನ್ನ ಏರುತ್ತಿದೆ.. ಹೊಸ ಬಗೆ ಹೊಸಬರ ಪ್ರಯತ್ನಕ್ಕೆ ಕನ್ನಡ ಚಿತ್ರರಸಿಕರು ಭೇಷ್ ಎಂದಿದ್ದಾರೆ.. ಅನಿವಾಸಿ ಕನ್ನಡಿಗರಿಗೆ ಚಂದನವನದ ಮೇಲಿರುವ ಪ್ರೀತಿ, ಈ ನಿಟ್ಟಿನಲ್ಲಿ ಎಲ್ಲರು ಒಗ್ಗೂಡಿ ಸದಭಿರುಚಿಯ ಸಿನಿಮಾ ನೀಡಬೇಕೆಂಬ ಹಂಬಲಕ್ಕೆ ಈಗ ಜಯ ಸಿಕ್ಕಿದೆ..

ಅರ್ಥಾತ್ ಶರಾವತಿ ಫಿಲ್ಸ್ಮ್ ಹಾಗು ಎಸ್.ಎನ್.ಎಸ್.ಸಿನಿಮಾಸ್ ಯುಎಸ್ಎ ಬ್ಯಾನರ್ ನ ಅಡಿ, ಎಸ್ ಸಂದೀಪ್ ಕುಮಾರ್ ಹಾಗು ನಟರಾಜ್ ಹಳೇಬೀಡು ಯುಎಸ್ಎ ಜಂಟಿ ನಿರ್ಮಾಣದಲ್ಲಿ, ನವ ಪ್ರತಿಭೆ ಪ್ರಸಿದ್ಧ್ ನಿರ್ದೇಶನದಲ್ಲಿ ತೆರೆ ಕಂಡ ರತ್ನಮಂಜರಿಗೆ ಗೆಲುವಿನ ಸಿಹಿ ಸಿಕ್ಕಿದೆ..

ಚಿತ್ರಕ್ಕೆ ಸಿಗುತ್ತಿರುವ ರೆಸ್ಮಾನ್ಸ್ ಗೆ ಚಿತ್ರತಂಡ ಫುಲ್ ಖುಷಿಯಾಗಿದೆ.. ಸಿನಿಮಾ ನೋಡಿ ಪ್ರೇಕ್ಷಕ ಖುಷಿಯಾಗಿದ್ದಾನೆ.. ವಿಮರ್ಶಕರು ಕೂಡ ಸಿನಿಮಾದ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.. ರಿಯಲ್ ಸ್ಟೋರಿಯನ್ನ ರೀಲ್ ಮೇಲೆ ಹೊಸ ತನದೊಂದಿಗೆ ಪ್ರಸೆಂಟ್ ಮಾಡಿರುವ ರೀತ ಎಲ್ಲರಿಗು ಇಷ್ಟವಾಗುವಂತಿದೆ.. ಒಟ್ಟಾರೆ ರತ್ನಮಂಜರಿ ಭರ್ಜರಿ ಮನರಂಜನೆಯನ್ನ ನೀಡುತ್ತಿದೆ

Comments

comments

Similar Articles

Top