ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಿದ ‘ರತ್ನಮಂಜರಿ’

ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಿದ ‘ರತ್ನಮಂಜರಿ’

ಶುಭ ಶುಕ್ರವಾದಂದು ತೆರೆಗೆ ಬಂದ ಕನ್ನಡದ ಸಿನಿಮಾ ರತ್ನಮಂಜರಿ.. ಹೇಳಿಕೇಳಿ ಸತ್ಯ ಘಟನೆಯನ್ನ ಆಧರಿಸಿದ ಕಥೆ ರತ್ನಮಂಜರಿಯ ಹೈಲೆಟ್.. ಅಮೆರಿಕಾದಲ್ಲಿ ನಡೆದ ನೈಜ ಘಟನೆಯನ್ನ ಸಿನಿಮಾಗೆ ರೂಪಾಂತರಿಸಲಾಗಿದೆ.. ಸಸ್ಪೆನ್ಸ್ ಎಲಿಮೆಂಟ್ ಗಳ ಜೊತೆಗೆ ತೆರೆಗೆ ಬಂದ ಈ ಚಿತ್ರವನ್ನ ನೋಡಿದ ಪ್ರೇಕ್ಷಕರಿಗೆ ಫುಲ್ ಪೈಸಾ ವಸೂಲ್ ಮೂವೀ ಎನ್ನಿಸಿದೆ.. ಇದಕ್ಕೆ ಸಿನಿಮಾದುದಕ್ಕೂ ಹಲವು ಕಾರಣಗಳು ಸಿಗುತ್ತವೆ…

ಮೊದಲಿಗೆ ಕಥೆಯ ಆಯ್ಕೆ ಸ್ಕ್ರೀನ್ ಪ್ಲೇ ಹಾಗು ನಿರ್ದೇಶಕರಾದ ಪ್ರಸಿದ್ದ್ ಅವರ ಕೆಲಸ ಹಿಡಿಸುವಂತೆ.. ಬೇಡವಾದ ಡೈಲಾಗ್ ಗಳನ್ನ ತುಂಬುವ, ದೃಶ್ಯಗಳನ್ನ ಸೇರಿಸುವ ಯಾವ ಕಾರ್ಯವನ್ನ ಸಹ ಮಾಡಿಲ್ಲ.. ಬರುವ ಪಾತ್ರಗಳು ಸಿನಿಮಾದ ಕತೆಗೆ ಪೂರಕವಾಗಿದೆ ಎನ್ನಿಸುತ್ತಿದ್ದು, ಪ್ರಸಿದ್ದ್ ಕನ್ನಡ ಇಂಡಸ್ಟ್ರಿಯ ಭರವಸೆಯ ನಿರ್ದೇಶಕನಾಗುವ ಸೂಚನೆ ನೀಡಿದ್ದಾರೆ..

ಒಂದು ಕೊಲೆ ಅದರ ಸುತ್ತ ಇಡೀ ಸಿನಿಮಾ ಎಲ್ಲು ಬೋರಾಗದ ರೀತಿ ಸಾಗುತ್ತೆ.. ಪ್ರೇಕ್ಷಕರಿಗೆ 10-15 ನಿಮಿಷಗಳಿಗೊಂದು ಟ್ವಿಸ್ಟ್ ಇದ್ದು ರತ್ನಮಂಜರಿ ತಾನಾಗೇ ನೋಡಿಸಿಕೊಂಡು ಸಾಗುತ್ತೆ…

ಹಂಸಲೇಖ ಅವರ ಶಿಷ್ಯ ಹರ್ಷವರ್ಧನ್ ಮ್ಯೂಸಿಕ್ ಸಿನಿಮಾದ ವೇಗಕ್ಕೆ ತಕ್ಕಂತಿದೆ.. ಕೊಡಗಿನ ಹಸಿರ ಮಡಿಲ ಚಿತ್ರಣವನ್ನ ಪ್ರೀತಮ್ ಕಣ್ಣು ಕಟ್ಟುವ ಹಾಗೆ ಸೆರೆ ಹಿಡಿದಿದ್ದು, ಪ್ರೇಕ್ಷಕರಿಗೆ ಹಿತವಾದ ಅನುಭವನ್ನ ನೀಡುತ್ತಿದೆ… ನಾಗತಿಹಳ್ಳಿ ಅವರ ಗರಡಿಯಲ್ಲಿ ರಾಜ್ ಚರಣ್- ಅಖಿಲಾ ಪ್ರಕಾಶ್ ಜೋಡಿಯ ನಟ ಉತ್ತಮವಾಗಿದೆ..

ಹೊಸಬರ ಈ ಸಿನಿಮಾಗೆ ವಿದೇಶಿ ಕನ್ನಡಿಗರು 4 ಕೋಟಿ ಬಂಡವಾಳ ಹೂಡಿದ್ದಾರೆ.. ಶರಾವತಿ ಫಿಲ್ಮ್ಸ್ ಹಾಗೂ ಎಸ್ ಎನ್ ಸಿನಿಮಾಸ್ ಬ್ಯಾನರ್ ನಡಿ ರತ್ನಮಂಜರಿ ರಿಚ್ಚಾಗೆ ಮೂಡಿ ಬಂದಿರೋದು ಪ್ರತಿ ಫ್ರೇಮ್ ನಲ್ಲಿಯೂ ಎದ್ದು ಕಾಣುತ್ತೆ.. ಒಟ್ಟಿನಲ್ಲಿ ಈ ವೀಕ್ ಎಂಡ್ ಗೆ ರತ್ನಮಂಜರಿ ನಿಮಗೆ ಸಖತ್ ಮನರಂಜನೆ ನೀಡೋದ್ರಲ್ಲಿ ಡೌಟೇ ಇಲ್ಲ..

Comments

comments

Similar Articles

Top