ಮೇ 24 ಕ್ಕೆ ‘ವೀಕೆಂಡ್’ ಮಸ್ತಿ ಶುರು..

ವೀಕೆಂಡ್.. ಹೊಸಬರ ಹೊಸ ರೀತಿಯ ಪ್ರಯತ್ನದ ಯೂಥ್ ಫುಲ್ ಸಿನಿಮಾ.. ಇದುವರೆಗು ಹಾಡು ಹಾಗೆ ಟ್ರೇಲರ್ ನ ಮೂಲಕ ಸದ್ದು ಮಾಡ್ತಿದ್ದ ವೀಕೆಂಡ್ ಚಿತ್ರ ಸದ್ಯ ತನ್ನ ಬಿಡುಗಡೆ ದಿನಾಂಕವನ್ನ ಕೂಡ ಪಕ್ಕ ಮಾಡಿಕೊಂಡಿದೆ.. ಇದೇ ಮೇ 24ಕ್ಕೆ ಸರಿಯಾಗಿವೀಕೆಂಡ್ಟೈಮ್ ಗೆ ತೆರೆಗೆ ಬರ್ತಿದೆ..

ಟ್ರೇಲರ್ ನಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇರೋದು ಎದ್ದು ಕಾಣ್ತಿದೆ.. ಹೊಸ ಪ್ರತಿಭೆಗಳ ಜೊತೆ ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್ ಡಿಫರೆಂಟ್ ರೋಲ್ ನ ಪ್ಲೇ ಮಾಡಿದ್ದಾರೆ.. ನಿರ್ದೇಶಕರಾದ ಶೃಂಗೇರಿ ಸುರೇಶ್ ಕಥೆ ಬರೆದು ತಾವೇ ನಿರ್ದೇಶನ ಮಾಡಿದ್ದಾರೆ.. ಮಂಜುನಾಥ್ ಡಿ, ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನ ಅಡಿಯಲ್ಲಿ ವಿಕೇಂಡ್ ಸಿದ್ದವಾಗಿದ್ದು, ಚಿತ್ರತಂಡಕ್ಕೆ ಗೆಲ್ಲುವ ವಿಶ್ವಾಸವನ್ನ ಮೂಡಿಸಿದೆ..

ಇದರ ಜೊತೆಗೆ ನಟಸಾರ್ವಭೌಮ, ಕವಲುದಾರಿ ಮುಂತಾದ ಚಿತ್ರಗಳನ್ನ ವಿತರಣೆ ಮಾಡಿದ್ದ ಧೀರಜ್ ಎಂಟಪ್ರೈಸಸ್ ಈ ಸಿನಿಮಾವನ್ನ ಡಿಸ್ಟ್ರಿಬ್ಯೂಟ್ ಮಾಡ್ತಿರೋದು ಚಿತ್ರತಂಡಕ್ಕೆ ಮತ್ತಷ್ಟು ಬಲ ತಂದಿದೆ.. ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದು, ಇವರೊಂದಿಗೆ ಮತ್ತಷ್ಟು ತಾರೆಯರು ಸ್ಕ್ರೀನ್ ಷೇರ್ ಮಾಡಿಕೊಂಡಿದ್ದಾರೆ..

Comments

comments

Similar Articles

Top