ರೋಚಕ ಸಿನಿಮಾ ‘ರತ್ನ ಮಂಜರಿ’ ಚಿತ್ರವನ್ನ ನೀವ್ಯಾಕೆ ನೋಡ್ಬೇಕು ಗೊತ್ತಾ..?

ಮೋಷನ್ ಪೋಸ್ಟರ್ ನಿಂದ ಪ್ರಾರಂಭದಲ್ಲೇ ಎಲ್ಲರ ಗಮನ ಸೆಳೆದ ಚಿತ್ರ ರತ್ನಮಂಜರಿ. ಇನ್ನು ಇತ್ತೀಚೆಗೆ‌ ಬಿಡುಗಡೆಯಾದ ಟೀಸರ್ ಹಾಗೂ ಹಾಡುಗಳು ಎಲ್ಲರ ಮೆಚ್ಚುಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಅನಿವಾಸಿ ಕನ್ನಡಿಗರು ‌ನಿರ್ಮಾಣದ ಈ ರತ್ನಮಂಜರಿ ಚಿತ್ರ ಇದೇ ಮೇ 17ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗ್ತಿದೆ.

ಯುವ ನಿರ್ದೇಶಕ ಪ್ರಸಿದ್ಧ್ ಹಾರರ್ ಚಿತ್ರಕ್ಕೆ ಕೈ ಹಾಕಿದ್ದಾರೆ. ನೈಜಘಟನೆಯಾಧಾರಿತ ಕಥೆಯಾಗಿರುವ ರತ್ನಮಂಜರಿ, ಅಮೇರಿಕಾದಲ್ಲಿ ನಡೆದ‌ ಕೊಲೆಯ ಸುತ್ತಾ ಸಾಗಲಿದೆ. ಈಗಾಗಲೇ 40% ಚಿತ್ರೀಕರಣ ಅಮೆರಿಕದಲ್ಲಿ ನಡೆದಿದ್ದು, ಉಳಿದು ಭಾಗವನ್ನು ಕೊಡಗು ಹಾಗೂ ಮಲೇಷಿಯಾದಲ್ಲಿ ನಡೆಯಲಿದೆ.

ಇನ್ನು ಪ್ರಮುಖ ಪ್ರಾತಗಳಲ್ಲಿ ಕಾಣಿಸಿಕೊಂಡಿರುವ ನಾಯಕ ರಾಜ್ ಚರಣ್ ಹಾಗೂ ನಾಯಕಿ ಅಖಿಲಾ ಪ್ರಕಾಶ್ ನಾಗತಿಹಳ್ಳಿ ಚಂದ್ರಶೇಖರ್ ಗರಡಿಯಲ್ಲಿ ಪಳಗಿದವರು. ಕೊಡವ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ಯುವ ಚಿತ್ರತಂಡ ಸಮರ್ಪಕವಾಗಿ ನಿರ್ವಹಿಸಿರುವುದು ಟೀಸರ್ ಹಾಗೂ ಹಾಡುಗಳ ಮೂಲಕ ಸಾಬೀತಾಗಿದೆ ಹಾಗೂ ಹೆಮ್ಮೆಯ ವಿಚಾರ.

ಶರಾವತಿ ಫಿಲ್ಮ್ಸ್ ಹಾಗೂ ಎಸ್.ಎನ್. ಎಸ್ ಸಿನಿಮಾ ಯು.ಎಸ್.ಎ. ಬ್ಯಾನರ್ ನಡಿಯಲ್ಲಿ ,ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಾದ ಎಸ್. ಸಂದೀಪ್ ಕುಮಾರ್ ಹಾಗೂ ನಟರಾಜ್ ಹಳೇಬೀಡು ಯು.ಎಸ್.ಎ ಜಂಟಿ ನಿರ್ಮಾಣದಲ್ಲಿ ಮೂಡಿರುವ ಚಿತ್ರವಿದು ರತ್ನಮಂಜರಿ.

ಶಿಷ್ಯ ಹರ್ಷವರ್ಧನ್ ಸಂಗೀತವಿರು ರತ್ನಮಂಜರಿ ಇದೇ 17ರಂದು ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ಅಮೇರಿಕಾದಲ್ಲಿ ನೆಲೆಸಿರುವ ಕನ್ನಡಿಗರು ಮಾಡುತ್ತಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

Comments

comments

Similar Articles

Top