ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗಬೇಕು : ಹರ್ಷಿಕಾ-ಭುವನ್ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ.

ರಾಯಚೂರು: ಇಲ್ಲಿನ ಮಾಣಿಕ್ ಪ್ರಭು ದೇವಸ್ಥಾನ ಬಳಿಯಿಂದ ಎಬಿವಿಪಿ, ಡಿವೈಎಫ್ಐ, ಎಸ್ ಎಫ್ ಬಿ ಸೇರಿದಂತೆ ಹಲವು ಸಂಘಟನೆಗಳು, ವಿದ್ಯಾರ್ಥಿಗಳು ವಿಶ್ವಕರ್ಮ ಸಮಾಜದ ಮುಖಂಡರು ಸೇರಿದಂತೆ ನಟಿ ಹರ್ಷಿಕಾ ಪೂಣಚ್ಚಾ ಹಾಗು ಭುವನ್ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡರು.. ರಾಯಚೂರಿನ ತೀನ್ ಖಂದಿಲ್ ಮಾರ್ಗವಾಗಿ ಪ್ರತಿಭಟನೆ ನಡೆಸಲಾಯಿತು.. ಈ ಸಂದರ್ಭದಲ್ಲಿ ಮಾತನಾಡಿದ ಹರ್ಷಿಕಾ ಮಧು ಸಾವಿನ ತನಿಖೆ ವೇಗವಾಗಿ ನಡೆಯಬೇಕು, ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ರು, ಅವರಿಗೆ ತಕ್ಕ ಶಿಕ್ಷೆಯಾಗಬೇಕು ಅಂದ್ರು.. ಮಧು ಸಾವಿಗೆ ನ್ಯಾಯ ಸಿಗುವವವರೆಗು ನಾವು ಇಡೀ ರಾಜ್ಯ ವ್ಯಾಪ್ತಿ ಹೋರಾಟ ಮಾಡೋದಾಗಿಯು, ಈ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ರು..

Comments

comments

Similar Articles

Top