ಎಲೆಕ್ಷನ್​ ಆಯ್ತು, ಅಭಿ ಸಿನಿಮಾಕ್ಕೂ ದರ್ಶನ್ನೇ ದಿಕ್ಕು..!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸ್ಟಾರ್​ ಮಗನಾಗಿ ಪಟ್ಟಿದ್ದ ನೋವೇ ರೆಬೆಲ್​ ಸ್ಟಾರ್​ ಅಂಬಿ ಮಗ ಅಭಿಷೇಕ್​ ಕೂಡ ಎದುರಿಸಿದ್ರಾ..? ಹಾಗನ್ನಿಸೋಕೆ ಕಾರಣ ಇದೆ. ಮಂಡ್ಯ ಪ್ರಚಾರ ಸಂಬೆಯ ಕೊನೆಯ ದಿನ ದರ್ಶನ್​, ತಂದೆ ಸಾವಿನ ನಂತ್ರ ತಮಗಾದ ನೋವು, ದುಃಖ, ಹತಾಶೆ ಅಭಿಗೂ ಆಗುತ್ತೆ ಅಂತ ಮೊದಲೇ ಹೇಳಿದ್ರಂತೆ. ಅದಕ್ಕೆ ಸಿದ್ದನಾಗುವಂತೆ ಹೇಳಿದ್ರಂತೆ. ಆ ನೋವಿನಲ್ಲಿ ದರ್ಶನ್​​ ಅಭಿಗೆ ಸಾಥ್​ ನೀಡಿದ್ದಾರೆ. ತಂದೆ ತೀರಿಕೊಂಡಾಗ ಎಲ್ಲರೂ ದೂರಾಗ್ತಾರೆ. ಆದ್ರೆ ತಂದೆ ತೀರಿಕೊಂಡ 11ನೇ ದಿನಕ್ಕೆ ಎಲ್ಲರೂ ಖಾಲಿಯಾಗ್ತಾರೆ, ಎಲ್ಲರೂ ಕೈ ಚೆಲ್ಲಿ ಕೂರ್ತಾರೆ ಆ ನೋವನ್ನ ಕಂಡಿದ್ದ ದರ್ಶನ್​​​, ತಮ್ಮನ ರೂಪದ ಅಭಿಗೆ ಈ ನೋವಿನಲ್ಲೀ ಸಾಂತ್ವನ ಹೇಳಿದ್ರು. ಎಲ್ಲಾ ಖಾಲಿಯಾದ ಮೇಲೆ ಭುಜಕ್ಕೆ ಭುಜ ಕೊಟ್ರು. ದರ್ಶನ್​ ಎಷ್ಟೆ ಸಾಥ್​ ಕೊಟ್ರು, ಅಭಿಗೆ ತಂದೆ ಅನ್ನೋ ಅಗಾಧ ಶಕ್ತಿಯ ಅನುಪಸ್ಥಿತಿ ಎದ್ದು ಕಾಣ್ತಿದೆ.

ಅಭಿ ಮುಂದಿದೆ ಎಲೆಕ್ಷನ್​ಗೂ ದೊಡ್ಡ ಸವಾಲು ಸದ್ಯ ತಾಯಿ ಸುಮಲತಾ ಮಂಡ್ಯ ಎಲೆಕ್ಷನ್​ನಲ್ಲಿ ದರ್ಶನ್​, ಯಶ್​ಗೆ ನೆರಳಾಗಿ ನಿಂತು ಅಣ್ಣಂದಿರ ದಾರಿಯಲ್ಲಿ ಸಾಗಿ, ತಾಯಿಯ ಗೆಲುವಿಗೆ ಶ್ರಮಿಸಿರೋ ಅಭಿಗೆ ಇನ್ನು ಇಂಡಸ್ಟ್ರಿಗೆ ಎಂಟ್ರಿ ಕೊಡಬೇಕಾದ ದೊಡ್ಡ ಸವಾಲಿದೆ. ಅಭಿ ಅಭಿನಯದ ಚೊಚ್ಚಲ ಚಿತ್ರ ಅಮರ್​ ರಿಲೀಸ್​ ಆಗಬೇಕಿದೆ. ಅಂಬಿ ಇಲ್ಲದೆ ಅಂಬಿ ಹೆಸರಿನಲ್ಲಿ ಅಭಿ ಈ ಸಿನಿಮಾಕ್ಕಾಗಿ ದರ್ಶನ್​ರಂತೆ ಏಕಾಂಗಿಯಾಗಿ ಆಖಾಡಕ್ಕೆ ಧುಮುಕಬೇಕಿದೆ.

ಚಕ್ರವ್ಯೂಹ ಅನ್ನೋ ಇಂಡಸ್ಟ್ರಿಗೆ ಈಗ ಅಭಿಷೇಕ್​ ಅಭಿಮನ್ಯು. ಹೊರಬರುವ ಕಲೆ ತಿಳಿಯದೇ ಹೋದರೂ ಸಾಥ್​ಗೆ ದರ್ಶನ್​ ಅನ್ನೋ ಶಕ್ತಿ ಇದೆ ಅನ್ನೋ ಧೈರ್ಯ ಇದ್ದರೂ, ಅಂಬಿ ಅನ್ನೋ ಪವರ್​ ಇಲ್ಲ ಅನ್ನೋ ಕೊರತೆ ಕಾಡ್ತಿದೆ. ದರ್ಶನ್​ ಹೇಗೆ ತಂದೆ ಅಗಲಿದ ನಂತ್ರ ಸಿನಿಮಾರಂಗದಲ್ಲಿ ಇಷ್ಟರ ಮಟ್ಟಿಗೆ ಬೆಳೆದು ನಿಂತರೋ, ಅಭಿ ಕೂಡ ಅದೇ ದಾರಿಯಲ್ಲಿ ಸಾಗಲಿದ್ದಾರೆ. ದರ್ಶನ್​ಗೆ ದಿನಕರ್​​ ಸಾಥ್​​ ಇತ್ತು. ಅದೃಷ್ಟ ಅಂದ್ರೆ ಅಭಿಗೆ ದರ್ಶನ್​ ಇದ್ದಾರೆ.

 

Comments

comments

Similar Articles

Top