ಪುನೀತ್​ ಗಾಡ್​​ಫಾದರ್​ ರಾಘಣ್ಣ ಹೇಳಿದ ಸೀಕ್ರೆಟ್ಸ್..!

ಪುನೀತ್​ ಗಾಡ್​​ಫಾದರ್​ ರಾಘಣ್ಣ ಹೇಳಿದ ಸೀಕ್ರೆಟ್ಸ್..!
ಪುನೀತ್​ ರಾಜ್​ಕುಮಾರ್​ ಹುಟ್ಟಿನಿಂದಲೇ ಸ್ಟಾರ್​ ಆದವರು, ಆದ್ರೆ ಪುನೀತ್​ ರನ್ನ ಪವರ್​ ಸ್ಟಾರ್​ ಮಾಡಿದ್ರಲ್ಲಿ ವರನಟ ಡಾ.ರಾಜ್​ಕುಮಾರ್​ ಅನ್ನೋ ಹೆಸರು ಹಾಗು ಪಾರ್ವತಮ್ಮ ರಾಜ್​ಕುಮಾರ್​ ಅನ್ನೋ ಶಕ್ತಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತೋ ಅಷ್ಟೆ ಮುಖ್ಯವಾದ ರೋಲ್​ ಅವ್ರ ಅಣ್ಣ ರಾಘವೇಂದ್ರ ರಾಜ್​ಕುಮಾರ್​ ಅವ್ರದ್ದು. ಪುನೀತ್​ರಾಜ್​ಕುಮಾರ್​ ಹೀರೋ ಆದಾಗ ಡಾ.ರಾಜ್​ಕುಮಾರ್​ ಇದ್ರೂ, ಆದ್ರೆ ಅವ್ರ ಮುಂದಿನ ಸಿನಿ ಲೈಫಿಗೆ ಬೆನ್ನುಲುಬಾಗಿ ನಿಂತವರು ರಾಘವೇಂದ್ರ ರಾಜ್​ಕುಮಾರ್. ರಾಜ್​ಕುಟುಂಬದ ಸಿನಿಮಾ ಆಯ್ಕೆ ಹಿಂದೆ ಇದ್ದವರು ಪಾರ್ವತಮ್ಮ ರಾಜ್​ಕುಮಾರ್​ ಹಾಗು ರಾಜ್​ರ ಸಹೋದರ ವರದಪ್ಪನವರು. ಅವ್ರ ನಂತ್ರ ಪುನೀತ್​ ಸಿನಿಮಾ ಆಯ್ಕೆ ಹಾಗೂ ಇಷ್ಟು ದೊಡ್ಡ ಸಕ್ಸಸ್​ನ ಹಿಂದೆ ನಿಂತವರು ರಾಘವೇಂದ್ರ ರಾಜ್​ಕುಮಾರ್ ಹಾಗಾಗಿ ಸಾಮಾನ್ಯರಿಗೆ ಗೊತ್ತಿಲ್ಲದ ಪುನೀತ್​ ಬಗೆಗಿನ ಇಂಟರೆಸ್ಟಿಂಗ್​ ವಿಷಯಗಳು ರಾಘಣ್ಣನಿಗೆ ಗೊತ್ತು. ಈ ಎಲ್ಲವನ್ನ ಸವಿಸ್ತಾರಾವಾಗಿ ಹೇಳಿಕೊಂಡಿದ್ದಾರೆ ರಾಘಣ್ಣ..

ವೀಕೆಂಡ್​ ವಿತ್​ ರಮೇಶ್​ನಲ್ಲಿ ರಾಘವೇಂದ್ರ ರಾಜ್​ಕುಮಾರ್
ಕಳೆದ ಸೀಸನ್​ಗಳಲ್ಲಿ ಶಿವರಾಜ್​ಕುಮಾರ್​ ಹಾಗೂ ಪುನೀತ್​ರಾಜ್​ಕುಮಾರ್​​ ವೀಕೆಂಡ್​ ವಿತ್​ ರಮೇಶ್​ ಭಾಗಿಯಾಗಿದ್ದಂತೆ. ಈ ಬಾರಿ ರಾಘವೇಂದ್ರ ರಾಜ್​ಕುಮಾರ್​ ಕಾರ್ಯಕ್ರಮದ ಅತಿಥಿಯಾಗಿದ್ದಾರೆ. ಪುನೀತ್​ ವಿಷಯಗಳಲ್ಲದೆ, ನಿರ್ಮಾಪಕನಾಗಿ ಮನೆಯ ಜವಾಬ್ದಾರಿ ಹೊತ್ತ ರಾಘಣ್ಣನ ಬದುಕಿನ ಅಪರೂಪ ಅನುಭವವನ್ನ ಕಟ್ಟಿ ಕೊಟ್ಟಿದ್ದಾರೆ ರಮೇಶ್​. ಸಾಕಷ್ಟು ಕುತೂಹಲ ಭರಿತ ವಿಷಯಗಳನ್ನ ಆಧರಿಸಿರೋ ರಾಘವೇಂದ್ರ ರಾಜ್​ಕುಮಾರ್​ರ ಸಂಚಿಕೆ ಮುಂದಿನ ವಾರ ಪ್ರಸಾರವಾಗುವ ಸಾಧ್ಯತೆ ಇದೆ. ರಾಘಣ್ಣನ ಅನಾರೋಗ್ಯ, ರಾಜ್​​ ವಿಧಿವಶಾರಾದಾಗ ನಡೆದ ಕೆಲವು ಘಟನೆಗಳ ಬಗ್ಗೆ ಎಲ್ಲೂ ಬಹಿರಂಗವಾಗದ ಮಾಹಿತಿಗಳು ಶೋನಲ್ಲಿ ಬಹಿರಂಗವಾಗಿವೆ ಅನ್ನೋ ಮಾಹಿತಿ ಇದೆ.

Comments

comments

Similar Articles

Top