ಶ್ರುತಿ ಹರಿಹರನ್​ ಕದ್ದು ಮದುವೆಯಾಗಿ ಇವತ್ತಿಗೆ 1 ವರ್ಷ..!

ಶ್ರುತಿ ಹರಿಹರನ್​ ಕದ್ದು ಮದುವೆಯಾಗಿ ಇವತ್ತಿಗೆ 1 ವರ್ಷ.!

ಶ್ರುತಿ ಹರಿಹರನ್ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ. ಇತ್ತೀಚೆಗೆ #MeToo ಅಭಿಯಾನದಿಂದ ದೊಡ್ಡ ಸಂಚಲನ ಸೃಷ್ಟಿಸಿದ್ದರು. ಆನಂತರದಲ್ಲಿ ಶ್ರುತಿ ಎಲ್ಲಿಯೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ‘ನಾತಿಚರಾಮಿ’ ಚಿತ್ರ ಬಿಡುಗಡೆಯಾದ್ದದ್ದು, ಬಿಟ್ಟರೇ ಮತ್ಯಾವ ಸಿನಿಮಾವೂ ಬಂದಿಲ್ಲ. ಅಂದ್ಹಾಗೆ ಇವತ್ತು ಶ್ರುತಿ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
ಎಂಟು ವರ್ಷದ ಹಿಂದೆಯೇ ಆಗಿತ್ತು ಲವ್ವು..!

#MeToo ಆರೋಪದ ವರೆಗೂ ಶ್ರುತಿ ಮದುವೆ ಆಗಿರೋದು ಯಾರೊಬ್ಬರಿಗೂ ತಿಳಿದಿರಲಿಲ್ಲ. ಅರ್ಜುನ್​ ಸರ್ಜಾ ಮೇಲೆ ದೂರು ಸಲ್ಲಿಸಿದ್ದಾಗಲೇ ಶ್ರುತಿ ಮದುವೆಯಾಗಿರೋ ವಿಚಾರ ಗೊತ್ತಾಗಿದ್ದು. ದೂರಿನಲ್ಲಿ ಶ್ರುತಿಹರಿಹರನ್​ W/O ರಾಮ್​ಕುಮಾರ್ ಅಂತಾ ನಮೂದಿಸಿದ್ದರು. ಅಲ್ಲಿಂದಾಚೆಗೆ ಮದುವೆ ಆಗಿರೋ ವಿಚಾರ ಹೊರಗೆ ಬಂದಿತ್ತು. ಅಂದ್ಹಾಗೆ ಶ್ರುತಿ- ರಾಮ್​ ಇಬ್ಬರದ್ದು ಏಳೆಂಟು ವರ್ಷದ ಫ್ರೆಂಡ್​ಶಿಪ್​. ಶ್ರುತಿಯ ಸಾಧನೆಯ ಹಿಂದೆ ರಾಮ್​ ನಿಂತಿದ್ದರು. ಇದೇ ಫ್ರೆಂಡ್​ಶಿಪ್​ ಮುಂದೆ ಪ್ರೀತಿಯಾಗಿಯೂ ಬದಲಾಗಿತ್ತು. ಮೂಲಗಳ ಪ್ರಕಾರ ಕಳೆದ ವರ್ಷವೇ ಇಬ್ಬರೂ ಮದುವೆಯಾಗಿದ್ದು, ಸುಖಿ ಸಂಸಾರ ನಡೆಸುತ್ತಿದ್ದಾರೆ. ಉಳಿದಂತೆ ವಿವಾದ ನಡುವೆಯೂ ಶ್ರುತಿ, ಚಿರು ಸರ್ಜಾ ಜೊತೆಗೆ ‘ಆದ್ಯ’ ಅನ್ನೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Comments

comments

Similar Articles

Top