ಅಂದು ಪುಷ್ಪಕ ವಿಮಾನ.. ಇಂದು ಕಂಟ್ರಿ ಮೇಡ್ ಚಾರಿ..

ಪುಷ್ಪಕ ವಿಮಾನ ನಂತರ ಮತ್ತೊಂದು ಭರ್ಜರಿ ಚಿತ್ರದೊಂದಿಗೆ ಬರ್ತಿದ್ದಾರೆ ನಿರ್ದೇಶಕ ಎಸ್.ರವೀಂದ್ರನಾಥ್. ಹೌದು, ಪುಪ್ಪಕವಿಮಾನ ಅಂತಹ ಉತ್ತಮ ಚಿತ್ರ ನೀಡಿದ ನಂತರ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದ್ದು ಸುಳ್ಳಲ್ಲ. ಇದೀಗ ಈ ನಿರ್ದೇಶಕನ ಬತ್ತಳಿಕೆಯಿಂದ ಹೊರ ಬರ್ತಿದೆ ಕಂಟ್ರಿ ಮೇಡ್ ಚಾರಿ.

ಪುಷ್ಪಕವಿಮಾನ ನಂತರ ಕೊಂಚ ಗ್ಯಾಪ್ ತೆಗೆದುಕೊಂಡ ನಿರ್ದೇಶಕ ಎಸ್. ರವೀಂದ್ರನಾಥ್, ತಮ್ಮ ಎರಡನೇ ಕನಸು ಕಂಟ್ರಿ‌ ಮೇಡ್ ಚಾರಿ ಚಿತ್ರವನ್ನು ಡೈರೆಕ್ಟರ್ ಮಾಡ್ತಿದ್ದಾರೆ. ಇದು ಔಟ್ ಅಂಡ್ ಔಟ್ ಮಾಸ್ ಥ್ರಿಲ್ಲರ್ ಚಿತ್ರ. ಇನ್ನು ಟಚ್ ಬೇರ್ ಸ್ಟುಡಿಯೋಸ್ ಬ್ಯಾನರ್ ನಡಿಯಲ್ಲಿ ಸುಶೀಲ್ ಸತ್ಯರಾಜ್ ಈ ಚಿತ್ರಕ್ಕೆ ಬಂಡವಾಳ ಹೂಡ್ತಿದ್ದಾರೆ.

ಈ ಚಿತ್ರಕ್ಕೆ ಬಹುತೇಕ ಹೊಸಬರಿಗೆ ಮಣೆ ಹಾಕಲಾಗಿದೆ.  ಹೌದು, ಈ ಸಲ ಹೊಸ ಮುಖಗಳಿಗೆ ಅವಕಾಶ ನೀಡಲು ಮುಂದಾಗಿದೆ ಚಿತ್ರತಂಡ. ಕಂಟ್ರಿ ಮೇಡ್ ಚಾರಿ ಚಿತ್ರ ಫ್ರೆಶ್ ಕಥೆಯಾಗಿದ್ದು, ಸದ್ಯದಲ್ಲಿಯೇ ಸೆಟ್ಟೇರಲಿದೆ. ಈ ಚಿತ್ರಕ್ಕೆ ನೂರೊಂದು ನೆನಪು ಖ್ಯಾತಿಯ ಎಸ್.ಕೆ. ರಾವ್ ಛಾಯಾಗ್ರಹಣ ಮಾಡ್ತಿದ್ದಾರೆ. ಒಟ್ಟಿನಲ್ಲಿ ಪುಪ್ಪಕವಿಮಾನ ನಂತರ ಗಾಂಧಿನಗರದಲ್ಲಿ ವಿಭಿನ್ನ ಚಿತ್ರದ ಮೂಲಕ ಹೊಸದೊಂದು ಸಂಚಲನ ಮೂಡಿಸಲು ಮುಂದಾಗಿದೆ ಕಂಟ್ರಿ ಮೇಡ್ ಚಾರಿ ಚಿತ್ರತಂಡ‌.

Comments

comments

Similar Articles

Top