ವೀಕೆಂಡ್ ಗೆ ‘ಅನಂತ’ನ ಹೊಸ ಅವತಾರ..!!

ಯಾವುದೇ ಪಾತ್ರವಾಗಲಿ, ಯಾವುದೇ ಭಾಷೆಯಾಗಲಿ ಅದಕ್ಕೆ‌ ಜೀವ ತುಂಬಿ ನಟಿಸುವ ನಟ ಆನಂತ್‌ ನಾಗ್. ಈ ವಯಸ್ಸಿನಲ್ಲೂ ಕಿಂಚಿತ್ತು ಹುಮ್ಮಸ್ಸು ಕುಗ್ಗದೆ, ಯಾವುದೇ‌ ಪಾತ್ರ ಕೊಟ್ಟರು ಅದ್ಭುತವಾಗಿ ನಟಿಸಿ, ನ್ಯಾಚುರಲ್​ ಸ್ಟಾರ್​ ಎನಿಸಿಕೊಂಡವರು ಆನಂತ್ ನಾಗ್. ವಿಭಿನ್ನ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡರು ಅದಕ್ಕೆ ನ್ಯಾಯ ಒದಗಿಸುತ್ತಾರೆ.

ಇನ್ನು ಆನಂತ್ ನಾಗ್ ಅವರಿಗೆ ಯುವ ಪ್ರತಿಭೆಗಳೆಂದರೆ ಬಹಳ ಪ್ರೀತಿ, ಹೀಗಾಗಿ ಯುವ ಪ್ರತಿಭೆಗಳು ಹೊಸ ಪ್ರಯೋಗ ಸಿನಿಮಾ ಕಥೆಗಳು ತಂದರು ಕೂಡ ಆನಂತ್‌ನಾಗ್ ಅವರು ಗ್ರೀನ್ ಸಿಗ್ನಲ್‌ ಕೊಟ್ಟರೆ. ಇದೀಗ ಇಂತಹದ್ದೇ ಹೊಸ ಸಿನಿಮಾ ಮಾಡಲು ಆನಂತ್ ನಾಗ್ ಮುಂದಾಗಿದ್ದಾರೆ.

ಥಿಲ್ಲರ್ ಕಥೆ ಹೇಳುವ ಹೊಸ ಸಿನಿಮಾ ವೀಕೆಂಡ್ ಚಿತ್ರದಲ್ಲಿ ಆನಂತ್ ನಾಗ್ ನಟಿಸುತ್ತಿದ್ದಾರೆ. ಬಹುತೇಕ ಹೊಸಬರ ಚಿತ್ರವಾಗಿರುವ ಈ ಚಿತ್ರದಲ್ಲಿ ಆನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದ ಟ್ರೈಲರ್​- ಆಡಿಯೋ ರಿಲೀಸ್​ ಆಗಿತ್ತು. ವೀಕೆಂಡ್ ಟ್ರೈಲರ್ ಎಲ್ಲರ ಗಮನ ಕೂಡ ಸೆಳೆದಿದೆ.

ಈ ವೀಕೆಂಡ್ ಚಿತ್ರಕ್ಕೆ ಶೃಂಗೇರಿ ಸುರೇಶ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಂಜುನಾಥ್ ಅವರು ನಿರ್ಮಾಣ ಮಾಡುತ್ತಿದ್ದು, ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೊಸ ಪ್ರತಿಭೆ ಮಿಲಿಂದ್ ಹಾಗೂ ಸಂಜನಾ ಬುರ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ ಹೊರಬರ ಚಿತ್ರವಾದರೂ ಟ್ರೈಲರ್ ಮೂಲಕವೇ ಸಾಕಷ್ಟು ಭರವಸೆಯನ್ನು ಹುಟ್ಟಿಸಿದೆ ವೀಕೆಂಡ್.

Comments

comments

Similar Articles

Top