ಡಿ ಬಾಸ್ ಅನ್ನೋದು ಅಭಿಮಾನಿಗಳು ನನಗೆ ನೀಡಿರುವ ಭೀಕ್ಷೆ – ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಗ್ ಸ್ಟಾರ್ ದರ್ಶನ್ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರ ಪ್ರಚಾರ ಕೈಗೊಳ್ಳಲ್ಲಿದ್ದಾರೆ ಎಂಬ ಬಗ್ಗೆ ಜೆಡಿಎಸ್ ನಲ್ಲಿ ಅಸಮಾಧಾನ ಉಂಟಾಗಿದೆ.. ಸ್ವತಃ ಸಿಎಂ ಕುಮಾರಸ್ವಾಮಿ ಅವರೇ ದರ್ಶನ್ ವಿರುದ್ದ ಹರಿಹಾಯ್ದಿದ್ದಾರೆ.. ಇನ್ನು ಈ ಬಗ್ಗೆ ಮಾತನಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ನಮ್ಮ ತಲೆ ಮೇಲೆ ಅಂಬರೀಶ್ ಅವರ ಕೈ ಇಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಎಲ್ಲರು ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ.. ಡಿ ಬಾಸ್ ಅನ್ನೋದು ಅಭಿಮಾನಿಗಳು ಕೊಟ್ಟಿರುವ ಭೀಕ್ಷೆ ಅದನ್ನ ಬೇರೆ ಯಾರು ನೀಡಿಲ್ಲ.. ಯಾರು ಏನು ಹೇಳಿದ್ರು ಚುನಾವಣೆ ಪ್ರಚಾರಕ್ಕೆ ಹೋಗೆ ಹೋಗ್ತೀನಿ.. ಏಪ್ರಿಲ್ 2 ರಿಂದ ಸುಮಲತಾ ಅವರೊಂದಿಗೆ ಪ್ರಚಾರ ಮಾಡೋದಾಗಿ ಹೇಳಿದ್ದಾರೆ..

ಇನ್ನು ಮನೆ ಮೇಲೆ ಕಲ್ಲುತೂರಿದ ಬಗ್ಗೆ ಪ್ರತಿಕ್ರಿಯೆ ನೀಡಿದ ದರ್ಶನ್ ಯಾರು ಏನು ಮಾಡಿದ್ರು, ಏನೇ ಹೇಳಿಕೊಂಡರು, ಈ ಮೊದಲೇ ಹೇಳಿದಂತೆ ಕೋಪ ಮಾಡಿಕೊಳ್ಳಲ್ಲ, ಬೇಜಾರು ಮಾಡಿಕೊಳ್ಳಲ್ಲ, ನನ್ನ ಕೆಲಸವನ್ನ ನಾನು ಮಾಡ್ತೀನಿ ಎಂದಿದ್ದಾರೆ..

Comments

comments

Similar Articles

Top