ಕಪ್ ಗೆಲ್ಲದಿದ್ರು ಕೊಹ್ಲಿಯನ್ನ ಕ್ಯಾಪ್ಟನ್ ಆಗಿ ಉಳಿಸಿಕೊಂಡಿರುವ RCB ಗೆ ವಿರಾಟ್ ಧನ್ಯವಾದ ಹೇಳಬೇಕು -ಗಂಭೀರ್

ತನ್ನ ಕಳಪೆ ಫಾರ್ಮ್ ನಿಂದಾಗಿ ಕಳೆದ ಬಾರಿ ಕ್ಯಾಪ್ಟನ್ ಸ್ಥಾನವನ್ನ ಹಾಗೆ 11 ರಲ್ಲಿ ಆಡುವ ಅವಕಾಶವನ್ನ ಕಳೆದುಕೊಂಡಿದ್ದ ಗೌತಮ್ ಗಂಭೀರ್ ಆರ್ಸಿಬಿ ತಂಡ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.. ವಿರಾಟ್ ಕೊಹ್ಲಿ ಕಳೆದ ಏಳೆಂಟು ವರ್ಷಗಳಿಂದ ಆರ್ ಸಿಬಿ ತಂಡವನ್ನ ಮುನ್ನಡೆಸುತ್ತಿದ್ದಾರೆ.. ಆದರೆ ಒಂದೇ ಒಂದು ಬಾರಿಯು ಐಪಿಎಲ್ ಟ್ರೋಫಿಯನ್ನ ಗೆಲ್ಲೋಕೆ ಆಗಿಲ್ಲ ಎಂದಿದ್ದಾರೆ..

ಹೀಗಾಗೆ ವಿರಾಟ್ ಕೊಹ್ಲಿ ಇಷ್ಟು ವರ್ಷ ಕಪ್ ಗೆಲ್ಲದೆ ಇದ್ರು ಆರ್ ಸಿಬಿ ಮ್ಯಾನೇಜ್ಮೆಂಟ್ ಕೊಹ್ಲಿಯನ್ನ ನಾಯಕನಾಗಿ ಮುಂದುವರೆಸಿರುವುದಕ್ಕೆ, ವಿರಾಟ್ ಆರ್ ಸಿಬಿಗೆ ಧನ್ಯವಾದ ಹೇಳಬೇಕು ಎಂದಿದ್ದಾರೆ

ಇಷ್ಟೆ ಅಲ್ಲದೆ, ವಿರಾಟ್ ಕೊಹ್ಲಿಯನ್ನ ಮಹೇಂದ್ರ ಸಿಂಗ್ ಧೋನಿ ಹಾಗು ರೋಹಿತ್ ಶರ್ಮಾಗೆ ಹೋಲಿಕೆ ಮಾಡಿ ಮಾತನಾಡುವುದು ಸರಿ ಅಲ್ಲ.. ಯಾಕಂದ್ರೆ ಈ ಇಬ್ಬರ ನೇತೃತ್ವದಲ್ಲಿ ಎರಡು ತಂಡಗಳು ಟ್ರೋಫಿಯನ್ನ ಗೆದ್ದಿದೆ.. ಆದರೆ ಕೊಹ್ಲಿ ಕೈಯಲ್ಲಿ ಇದು ಸಾಧ್ಯವಾಗಿಲ್ಲ.. ಹೀಗಾಗೆ ಕೊಹ್ಲಿಯನ್ನ ಈ ಇಬ್ಬರ ಜೊತೆಗೆ ಹೋಲಿಕೆ ಮಾಡೋದು ತಪ್ಪು ಎಂದಿದ್ದಾರೆ..

Comments

comments

Similar Articles

Top