25 ದಿನ ಪೂರೈಸಿದ ಕೆಮಿಸ್ಟ್ರಿ ಆಫ್ ಕರಿಯಪ್ಪ..

ಕೆಮಿಸ್ಟ್ರಿ ಆಫ್ ಕರಿಯಪ್ಪ ಯಶಸ್ವಿಯಾಗಿ 50ನೇ ದಿನದತ್ತ ಮುನ್ನುಗುತ್ತಿದೆ. ಯಾವುದೇ‌ ದೊಡ್ಡ ನಿರೀಕ್ಷೆಗಳು ಇಲ್ಲದೆ ಕನ್ನಡ ಪ್ರೇಕ್ಷಕರನ್ನು ಮನರಂಜಿಸಿದ ಚಿತ್ರವೇ ಈ ಕೆಮಿಸ್ಟ್ರಿ ಆಫ್ ಕರಿಯಪ್ಪ. ಕಿರಿಕ್ ಪಾರ್ಟಿ ಚಿತ್ರದ ಖ್ಯಾತಿಯ ಚಂದನ್ ಆಚಾರ್ಯ, ಹಾಸ್ಯ ಕಲಾವಿದ ತಬಲಾ ನಾಣಿ ಮುಖ್ಯಭೂಮಿಯ ಈ ಚಿತ್ರ ಪಕ್ಕಾ ಫ್ಯಾಮಿಲಿ ವಿತ್ ಕಾಮಿಡಿ ಚಿತ್ರ. 

ರಿಯಾಲಿಟಿಗೆ ಹತ್ತಿರವಾಗಿರುವ ಈ ಸರಳ ಕಥೆ ಹಾಗೂ ಉತ್ತಮ ಸ್ಕ್ರೀನ್ ಪ್ಲೇ ಕನ್ನಡ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಜನರಿಗೆ ನಗೆ ಕಡಲೆಗೆ ತೆಲಿಸುವ ಈ ಕೆಮಿಸ್ಟ್ರಿ ಆಫ್ ಕರಿಯಪ್ಪ, ಕಡಿಮೆ ಥಿಯೇಟರ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದರು, ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನೂ ಸಹ ಸೆಳೆದಿದೆ. 

ಎಂ. ಸಿರಿ ಮಂಜುನಾಥ್ ನಿರ್ಮಾಣ, ಕುಮಾರ್  ನಿರ್ದೇಶನವಿರೋ ಕೆಮಿಸ್ಟ್ರಿ ಆಫ್ ಕರಿಯಪ್ಪ ಸದ್ಯ 25 ದಿನಗಳಲ್ಲಿ ಪೂರೈಸಿ 50ನೇ ದಿನದತ್ತ ಮುನ್ನುಗ್ತಿದೆ. ಒಟ್ಟಿನಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆದಿರುವ ಈ ಕೆಮಿಸ್ಟ್ರಿ ಆಫ್ ಕರಿಯಪ್ಪ 100 ದಿನ ಪೂರೈಸುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

Comments

comments

Similar Articles

Top