ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಸಿದ್ದಾರ್ಥ.. ಯಾರು ಗೊತ್ತಾ ಹುಡುಗಿ..?

ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಗುರುತಿಸಿಕೊಂಡಿರುವ ನಟ ವಿಜಯ್ ಸೂರ್ಯ ಮದುವೆಯಾಗಲು ಸಿದ್ದವಾಗಿದ್ದಾರೆ.. ಪ್ರೇಮಿಗಳ ದಿನವಾದ ಫೆಬ್ರವರಿ 14ಕ್ಕೆ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ‌ ಕಾಲಿಡಲ್ಲಿದ್ದಾರೆ.. ವಿಜಯ್ ಕೈ ಹಿಡಯಲಿರುವ ಹುಡಗಿ ಹೆಸರು ಚೈತ್ರ ಅಂತ.. ಸಾಫ್ಟ್ ವೇರ್ ಉದ್ಯೋಗಿ ಅಗಿರುವ ಚೈತ್ರ ಹಾಗೆ ನಟ ವಿಜಯ್ ಅವರದ್ದು ಅರೇಂಜ್ ಮ್ಯಾರೇಜ್…

ಹೌದು ಈ ಎರಡು ಕುಟುಂಬಗಳು ಕಳೆದ ಒಂಬತ್ತು ವರ್ಷಗಳಿಂದ ಸ್ನೇಹಿತರಂತೆ.. ಎರಡು ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದ್ದು, ಇಬ್ಬರ ಮನೆಯಲ್ಲು ಮದುವೆ ಮಾತುಕತೆ ಪ್ರಸ್ತಾಪವಾಗಿದೆ.. ಇದಕ್ಕೆ ವಿಜಯ್ ಹಾಗೆ ಚೈತ್ರ ಸಹ ಒಪ್ಪಿಕೊಂಡಿದ್ದಾರೆ.. ಇಬ್ಬರ ಗಣಕೂಟ ರಾಶಿಫಲ ಸಹ ಮ್ಯಾಚ್ ಆಗಿದ್ಯಂತೆ.. ಹೀಗಾಗೆ ಮನೆಯವರು ಒಪ್ಪಿದ ಬಳಿಕ ಈ ಇಬ್ಬರು ಒಬ್ಬರನ್ನೊಬ್ಬರು ಮೀಟ್ ಮಾಡಿ ಮಾತನಾಡಿ ಒಪ್ಪಿಕೊಂಡಿದ್ದಾರಂತೆ.. ಹೀಗಂತ ವಿಜಯ್ ಸೂರ್ಯ ಹೇಳಿಕೊಂಡಿದ್ದಾರೆ..

ಸದ್ಯ ಸೀರಿಯಲ್ ಸೇರಿದಂತೆ ಕೆಲ ಸಿನಿಮಾದಲ್ಲಿ ಬ್ಯೂಸಿಯಾಗಿರುವ ವಿಜಯ್ ಸೂರ್ಯ ಮದುವೆಗಾಗಿ ಎಲ್ಲ ಕೆಲಸವನ್ನ ಮುಗಿಸಿಕೊಂಡು ಫ್ರೀ ಆಗಿಬಿಟ್ಟಿದ್ದಾರೆ.. ಫೆಬ್ರವರಿ 14ಕ್ಕೆ ಈ ಶುಭಸಮಾರಂಭ ನಡೆಯಲಿದ್ದು, ಅಗ್ನಿಸಾಕ್ಷಿಯ ಸಿದ್ಧಾರ್ಥ್ ಹಲವು ಹೆಣ್ಣುಮಕ್ಕಳ ಹಾರ್ಟ್ನ ಪಂಚರ್ ಮಾಡಿ ಮದುವೆಯಾಗೋ ಸಿದ್ದವಾಗಿರೋದಂತು ಸತ್ಯ..

Comments

comments

Similar Articles

Top