ಫೆಬ್ರವರಿ 1 ಕ್ಕೆ ಸಿಂಪಲ್ ಸುನಿ ‘ಬಜಾ಼ರ್’ ಸಿನಿಮಾ ರಿಲೀಸ್..!!

ಕಾರಣಾಂತರಗಳಿಂದ ತನ್ನ ಬಿಡುಗಡೆ ದಿನಾಂಕವನ್ನ ಮುಂದೆ ಹಾಕಿಕೊಂಡಿದ್ದ ಬಜಾ಼ರ್ ಚಿತ್ರ ಫೆಬ್ರವರಿ ಮೊದಲ ದಿನ ತೆರೆ ಕಾಣಲು ಸಜ್ಜಾಗಿದೆ… ಲವ್ ಪ್ರತಿರೂಪವಾದ ಪಾರಿವಾಳದ ಮೂಲಕ ಗಿರೇಬಾಜಿ ಆಟ ಹಾಗೂ ಅದರ ಜೊತೆಜೊತೆಗೆ ಅಂಟಿಕೊಂಡ ರೌಡಿಸಂನ ಮತ್ತೊಂದು ಮುಖವನ್ನ ಅನಾವರಣ ಮಾಡಲು  ಬರ್ತಿದೆ ಬಜಾ಼ರ್..

ಚೊಚ್ಚ ಸಿನಿಮಾದ ಮೂಲಕ ನಾಯಕ ಧನ್ವೀರ್ ಚಿತ್ರರಂಗದಲ್ಲಿ ನೆಲೆನಿಲ್ಲುವ ಭರವಸೆಯನ್ನ ನೀಡಿದ್ದಾರೆ.. ಹೀರೋಗಿರಬೇಕಾದ ಮ್ಯಾನರಿಸಂ, ಆಟಿಟ್ಯೂಡ್ ಎಲ್ಲವನ್ನ ಕ್ಯಾರಿ ಮಾಡಿರೋದು, ಡೈಲಾಗ್ ಡಿಲವರಿ, ಲುಕ್ ಜೊತೆಗೆ ಕಟ್ಟುಮಸ್ತಾಗೆ ದೇಹವನ್ನ ಸಿದ್ದ ಮಾಡಿಕೊಂಡಿದ್ದಾರೆ…

ಸಿನಿಮಾದಲ್ಲಿ ಪಾರಿವಾಳದ ರೇಸ್ ​ನಿಂದ ಬೆಂಗಳೂರಿನಲ್ಲಿ ಭೂಗತ ಜಗತ್ತು ಹೇಗೆ ಬೆಳೀತು, ಇಲ್ಲಿ ಗಿರೇಬಾಜಿಯಲ್ಲಿ ಹೀರೋ ಹೇಗೆ ಬೆಳೀತಾನೆ, ನಡುವಿನ ಲವ್​ ಸ್ಟೋರಿ ಹೇಗಿರುತ್ತೆ ಅನ್ನೋ ಕಥೆ ಹೇಳಲಿದೆ ಬಜಾ಼ರ್.. ಲವ್ ನ ಜೊತೆಗೆ ಕಾಮಿಡಿ ಹಾಗೂ ಕ್ರೈಮ್ ನ ಕಹಾನಿಯನ್ನು ಮಿಕ್ಸ್ ಮಾಡಿರುವ ಸಿಂಪಲ್ ಸುನಿ, ಪಕ್ಕ ಎಂಟ್ರಟೈನ್ಮೆಂಟ್ ಎಲಿಮೆಂಟ್ ಗಳನ್ನ ಸೇರಿಸಿ ಬಜಾ಼ರ್ ಸಿನಿಮಾವನ್ನ ಸಿದ್ದಮಾಡಿದ್ದಾರೆ..

 ಧನ್ವೀರ್ ಗೆ ನಾಯಕಿಯಾಗಿ ಅಧಿತಿ ಪ್ರಭುದೇವ ಕಾಣಿಸಿಕೊಂಡಿದ್ದು, ಶರತ್ ಲೋಹಿತಾಶ್ವ, ಸಾಧುಕೋಕಿಲಾ, ದೀಪಕ್ ಶೆಟ್ಟಿ ಸೇರಿದಂತೆ ದೊಡ್ಡ ತಾರಬಳಗ ಸಿನಿಮಾದಲ್ಲಿದ್ದು, ಕೆಜಿಎಫ್ ನ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದು, ಸಂತೋಷ್​ ರೈ ಪಾತಾಜೆ ಕ್ಯಾಮರಾ ವರ್ಕ್​ ಮಾಡಿದ್ದಾರೆ.

Comments

comments

Similar Articles

Top