ನವೀನ್ ಸಜ್ಜು ವಾಯ್ಸ್ ನಲ್ಲಿ ಹುಡುಗರ ಲವ್ವು-ನೋವು..!! ಎಲ್ಲ ಕೆಮಿಸ್ಟ್ರಿ ಆಫ್ ಕರಿಯಪ್ಪನ ಕಥೆ-ವ್ಯಥೆ..!

ಬಿಗ್ಬಾಸ್ ಮನೆ ಸೇರಿರುವ ನವೀನ್ ಸಜ್ಜು ಅದಕ್ಕು ಮೊದಲೇ ಒಂದು ಕಿಕ್ ಕೊಡುವ ಹಾಡೊಂದನ್ನ ಹಾಡಿ ಹೋಗಿದ್ದಾರೆ.. ಅದು ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದಲ್ಲಿ.. ಎಣ್ಣೆ ನಿಮ್ದು ಊಟ ನಮ್ದು ಅನ್ನೋ ಹಾಡು ಯಾವ ರೇಂಜಿಗ್ ಸೌಂಡ್ ಮಾಡಿತ್ತೋ, ಅದೇ ಕ್ಯಾಟಗರಿಗೆ ಸೇರುವ ಮತ್ತೊಂದು ಕಿಕ್ ಕೊಡುವ ಹಾಡು ‘ಊರ್ವಶಿ ಅವಳು’ ಗೀತೆ.. ಈ ಹಾಡಿಗೆ ಲಿರಿಕ್ಸ್ ಬರೆದಿರೋದು ಈ ಚಿತ್ರದ ನಿರ್ದೇಶಕರಾದ ಕುಮಾರ್ ಹಾಗೆ ಸಂಗೀತ ನೀಡಿರೋದು ಅರವ್ ರಿಶಿಕ್..

ಅಂದಹಾಗೆ ಈ ಸಿನಿಮಾದ ಮೂಲಕ‌ ನಾಯಕನಾಗಿ ಪ್ರಮೋಷನ್ ಪಡೆದುಕೊಂಡಿದ್ದಾರೆ ಕಿರಿಕ್ ಪಾರ್ಟಿ ಸಿನಿಮಾದ ನಟ ಚಂದನ್ ಆಚಾರ್.. ಈತನಿಗೆ ನಾಯಕಿಯಾಗಿ ಸಂಜನಾ ಕಾಣಿಸಿಕೊಂಡಿದ್ರೆ, ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.. ಎಂ ಸಿರಿ ಪ್ರೊಡೆಕ್ಷನ್ ಅಡಿ ಡಾ.ಮಂಜುನಾಥ್ ಡಿಎಸ್ ಚಿತ್ರವನ್ನ ನಿರ್ಮಾಣ ಮಾಡಿದ್ದು, ಸುಚೇಂದ್ರ ಪ್ರಸಾದ್, ತಬಲಾ ನಾಣಿ ಅಭಿನಯಿಸಿದ್ದು, ಫೆಬ್ರವರಿಯಲ್ಲಿ ಕೆಮಿಸ್ಟ್ರಿ ಆಫ್ ಕರಿಯಪ್ಪ ತೆರೆಗೆ ಬರಲಿದೆ..

Comments

comments

Similar Articles

Top