ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ಚಿತ್ರಕ್ಕು ತಟ್ಟಿದ ಐಟಿ ಬಿಸಿ..!!

ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ಚಿತ್ರಕ್ಕು ತಟ್ಟಿದ ಐಟಿ ಬಿಸಿ..!!

ಸ್ಯಾಂಡಲ್ ವುಡ್ ನ ದೊಡ್ಡ ಮನೆಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.. ಒಂದು ಕಡೆ ಶಿವರಾಜ್ ಕುಮಾರ್ ನಿವಾಸ ಮತ್ತೊಂದು ಕಡೆ ಪುನೀತ್ ರಾಜ್ ಕುಮಾರ್ ಅವರ ನಿವಾಸದಲ್ಲಿ ಐಟಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.. ಇದರ ನಡುವೆ ಈ ಐಟಿ ಎಫೆಕ್ಟ್ ರಾಘವೇಂದ್ರ ರಾಜ್ ಕುಮಾರ್ ಅವರ ಪುತ್ರನ ಸಿನಿಮಾದ ಮೇಲೆ ಬೀರಿದೆ.. 

ಹೌದು, ಸದ್ಯ ಈ ಇಬ್ಬರು ನಟರು ಮಾತ್ರವಲ್ಲ ಜಯಣ್ಣ ಅವರ ಮನೆ‌ ಮೇಲು ಐಟಿ ಅಧಿಕಾರಿಗಳು ದಾಳಿ‌ ನಡೆಸಿದ್ದಾರೆ.. ಜಯಣ್ಣ ನಿರ್ಮಾಪಕರು ಮಾತ್ರವಲ್ಲದೆ ವಿತರಕರು ಆಗಿದ್ದಾರೆ.. ಕಳೆದ ಶುಕ್ರವಾರವಷ್ಟೆ ತೆರೆ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ತಿರುವ ಅನಂತು vs ನುಸ್ರತ್ ಸಿನಿಮಾದ ವಿತರಣೆಯ ಹಕ್ಕನ್ನ ಇದೇ ಜಯಣ್ಣ ಕಂಬೈನ್ಸ್ ಪಡೆದುಕೊಂಡಿದೆ..

ಎರಡನೇ ವಾರ ಅರ್ಥಾತ್ ಇಂದಿನಿಂದ ಬಿ ಮತ್ತು ಸಿ ಸೆಂಟರ್ ಗಳಲ್ಲಿ ಅನಂತು vs ನುಸ್ರತ್ ಸಿನಿಮಾ ಬಿಡುಗಡೆಗೊಳ್ಳಬೇಕಿತ್ತು..ಕಾರ್ಕಳ, ಹುಬ್ಬಳ್ಳಿ, ತುಮಕೂರು ಸೇರಿದಂತೆ ರಾಜ್ಯದ 25 ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಆಗಬೇಕಿತ್ತು.. ಆದರೆ ಜಯಣ್ಣ ಅವರ ಮೇಲೆ ಐಟಿ ರೇಡ್ ಆಗಿರೋದ್ರಿಂದ ಥಿಯೇಟರ್‌ ಮಾಲೀಕರ ಜೊತೆ ಮಾತನಾಡಲು ಸಾಧ್ಯವಾಗಿಲ್ಲ.. ಹೀಗಾಗೆ ಈ ಎಲ್ಲ ಚಿತ್ರಮಂದಿರಗಳಲ್ಲಿ ಬೇರೆ ಚಿತ್ರಗಳನ್ನ ಪ್ರದರ್ಶನ ಮಾಡಲಾಗುತ್ತಿದೆ..

Comments

comments

Similar Articles

Top