ನಿಮ್ಮ ಮಕ್ಕಳನ್ನ‌ ಶಾಲೆಗೆ‌ ಸೇರಿಸಲು ಆಧಾರ್ ಕಡ್ಡಾಯವಲ್ಲ..!! ಎಚ್ಚರಿಕೆ ರವಾನಿಸಿದ ಯುಐಡಿಎಐ..!!

ನಿಮ್ಮ ಮಕ್ಕಳನ್ನ‌ ಶಾಲೆಗೆ‌ ಸೇರಿಸಲು ಆಧಾರ್ ಕಡ್ಡಾಯವಲ್ಲ..!! ಎಚ್ಚರಿಕೆ ರವಾನಿಸಿದ ಯುಐಡಿಎಐ..!!

ಆಧಾರ್ ಕಾರ್ಡ್ ಮಾನ್ಯತೆಯನ್ನ ಕುರಿತು ಈ ಹಿಂದೆಯೆ ಸುಪ್ರೀಂ ಕೋರ್ಟ್ ಆದೇಶವನ್ನ ಹೊರಡಿಸಿದೆ.. ಶಾಲಾ ಪ್ರೇವೆಶಾತಿ, ಬ್ಯಾಂಕ್ ಖಾತೆ ಮತ್ತು ಮೊಬೈಲ್ ಸಂಪರ್ಕಕ್ಕೆ ಆಧಾರ್ ಕಡ್ಡಾಯಗೊಳಿಸುವಂತಿಲ್ಲ ಅಂತ ಆದೇಶ ನೀಡಿದೆ..

ಹೀಗಿದ್ರು‌ ಕೆಲವು ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿ ಸಂದರ್ಭದಲ್ಲಿ ಆಧಾರ್ ನೆಪವೊಡ್ಡಿ ದಾಖಲಾತಿಯನ್ನ ವಿಳಂಬ ಮಾಡುತ್ತಿರುವುದು ಕಂಡು ಬಂದಿದೆ.. ಹೀಗಾಗೆ ಈ ಬಗ್ಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ಮರು ಎಚ್ಚರಿಕೆಯನ್ನ ನೀಡಿದೆ..

ದಿಲ್ಲಿಯ 1500 ಖಾಸಗಿ ಶಾಲೆಗಳಲ್ಲಿ ನರ್ಸರಿ ಮತ್ತು ಪ್ರೀನರ್ಸರಿ ಪ್ರವೇಶಾತಿ ಆರಂಭಗೊಂಡಿದ್ದು, ಪೋಷಕರನ್ನ ಆಧಾರ್ ಹೆಸರಿನಲ್ಲಿ ಸತಾಯಿಸುತ್ತಿವೆ‌‌.. ಹೀಗಾಗೆ ಆಧಾರ್ ಪ್ರಾಧಿಕಾರ ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಶಾಲಾ ದಾಖಲಾತಿಗೆ ಆಧಾರ್ ಕಡ್ಡಾಯವಲ್ಲ ಎಂಬುದನ್ನ ಮತ್ತೊಮ್ಮೆ ತಿಳಿ ಹೇಳಿದೆ..

 

Comments

comments

Similar Articles

Top