ಮಾರುವೇಷದಲ್ಲಿ KGF ಸಿನಿಮಾ ನೋಡಿದ ಕನ್ನಡದ ಸ್ಟಾರ್ ನಾಯಕ ನಟ ..!! ನಂತರ ಹೇಳಿದ್ದೇನು..?

ಮಾರುವೇಷದಲ್ಲಿ KGF ಸಿನಿಮಾ ನೋಡಿದ ಕನ್ನಡದ ಸ್ಟಾರ್ ನಾಯಕ ನಟ ..!! ನಂತರ ಹೇಳಿದ್ದೇನು..?

ಕೆಜಿಎಫ್ ಸಿನಿಮಾ ಕನ್ನಡ‌ ಚಿತ್ರರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲು‌ ದೊಡ್ಡ ಸುದ್ದಿಯಾಗಿದೆ.. ಸುದ್ದಿ ಮಾತ್ರವಲ್ಲ ಗಲ್ಲಾಪೆಟ್ಟಿಗೆಯಲ್ಲು ಸಖತ್ತಾಗೆ ಸೌಂಡ್ ಮಾಡ್ತಿದೆ.. ಇಡೀ ಸಿನಿಮಾ ಸೆಲೆಬ್ರಿಟಿಗಳೆ ಕೆಜಿಎಫ್ ಗೆ ಜೈಕಾರ ಹಾಕುತ್ತಿದ್ದಾರೆ.. ಇನ್ನು ಕನ್ನಡದ ಹೆಸರಾಂತ ನಟರೊಬ್ಬರು ಕೆಜಿಎಫ್ ಸಿನಿಮಾವನ್ನ ಮಾರುವೇಷದಲ್ಲಿ ನೋಡಿ ಬಂದಿದ್ದಾರೆ

ಹೌದು ಅದು ಬೇರೆ ಯಾರು ಅಲ್ಲ ನಮ್ಮ ನಿಮ್ಮ ನೆಚ್ಚಿನ ನವರಸ ನಾಯಕ ಜಗ್ಗೇಶ್ ಅವರು.. ಲುಂಗಿ ತೊಟ್ಟು ಹವಾಯ್ ಚಪ್ಪಲಿ ಹಾಕಿ, ಮಂಕಿಕ್ಯಾಪ್ ನಲ್ಲಿ ಮುಖವನ್ನ ಮುಚ್ಚಿಕೊಂಡು ಥಿಯೇಟರ್ ಒಂದಕ್ಕೆ ಹೋಗಿದ್ದ ನವರಸ ನಾಯಕ ಮುಂದಿನ ಕ್ಲಾಸ್ ನಲ್ಲಿ ಕೂತು ಸಾಮಾನ್ಯ ಪ್ರೇಕ್ಷಕನಂತೆ ಅವರೊಂದಿಗೆ ಚಿತ್ರವನ್ನ ಎಂಜಾಯ್ ಮಾಡಿದ್ದಾರೆ

ಜೊತೆಗೆ ಈ ಸಂದರ್ಭದಲ್ಲಿ ತನ್ನ ಅಕ್ಕಪಕ್ಕ ಇದ್ದ ಪ್ರೇಕ್ಷಕರ ಬಳಿ ಸಿನಿಮಾ ಬಗ್ಗೆ ವಿಚಾರಿಸಿದ್ದಾರೆ.. ಆಗ ಅಭಿಮಾನಿ ಏನು ಹೇಳಿದ ಎಂಬುದನ್ನ ತಮ್ಮ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.. ” ನನ್ನಪಕ್ಕ ಸುಮಾರು 17ಪ್ರಾಯದ ಹುಡುಗ ಹೋಟೆಲ್ ಸರ್ವರ್ ಕೂತಿದ್ದ.! ಅವನ ಜೊತೆ ದ್ವನಿ ಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ.. ಪ್ರತಿ ಪ್ರಶ್ನೆಗೆ ಅವನ ಉತ್ತರ ಚಿಂದಿ ಅನ್ನುತ್ತಿದ್ದ!ಅವನು ಪಕ್ಕ ದರ್ಶನ #fan ಅಂತೆ! ಅವನು ಹೇಳಿದ ಮಾತು ಕಣ್ಣು ಒದ್ದೆಯಾಯಿತು.!ಕನ್ನಡ ಗೆಲ್ಲಬೇಕು ಸಾರ್ ಮಗಂದು ಬರಿ ಬೇರೆ ಭಾಷೆಗೆ ಜೈಅಂತಾರೆ ಈಗ ಅವರ ಪುಂಗಿಬಂದ್ ಅಂದಅಂತ ಪ್ರೇಕ್ಷಕರ ಜೊತೆ ನಡೆಸಿದ ಸಂಭಾಷಣೆಯನ್ನ ಶೇರ್ ಮಾಡಿಕೊಂಡಿದ್ದಾರೆ..

ಅಂದಹಾಗೆ ಜಗ್ಗೇಶ್ ಹೀಗೆ ಮಾಡಲು ಮುಖ್ಯ ಕಾರಣ.. ತಾವು ಏಕಾಂತವನ್ನ ಬಯಸುತ್ತಾರೆ.. ಸಾಮಾನ್ಯರಲ್ಲಿ ಸಾಮಾನ್ಯನಾಗಿ ಇರಬೇಕು ಎಂಬ ಹಂಬಲ ಹೊಂದಿರುವವರು ಜಗ್ಗೇಶ್.. ಹೀಗಾಗೆ ಕೆಲವೊಮ್ಮೆ ವೇಷ ಬದಲಿಸಿಕೊಂಡು ಏಕಾಂತವನ್ನ ಎಂಜಾಯ್ ಮಾಡುವುದುಂಟು.. ಜೊತೆಗೆ ಕೆಜಿಎಫ್ ಸಿನಿಮಾ ನೋಡಿ ಇಡೀ ಚಿತ್ರತಂಡಕ್ಕೆ ಸಲಾಂ ಎಂದಿದ್ದಾರೆ.

 

Comments

comments

Similar Articles

Top