ಆರೆಂಜ್ ನಲ್ಲಿ‌ ಕೆಜಿಎಫ್ ಕಿರಾತಕನ ಸೌಂಡು..!!

ಆರೆಂಜ್ ನಲ್ಲಿ‌ ಕೆಜಿಎಫ್ ಕಿರಾತಕ..!!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಪ್ರಶಾಂತ್ ರಾಜ್ ನಿರ್ದೇಶನ ಆರೆಂಜ್ ಸಿನಿಮಾ ಇದೇ ವಾರ ತೆರೆಗೆ ಬರ್ತಿದೆ.. ಈಗಾಗ್ಲೇ ಆರೆಂಜ್ ಬಗ್ಗೆ ಸಿನಿ ಫ್ಯಾನ್ ಗಳಲ್ಲಿ ಕುತೂಹಲ ಹೆಚ್ಚಾಗಿದ್ದು, ಗಣಿಯ ವಿಭಿನ್ನ ಗೆಟಪ್ ಅನ್ನ ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದ್ದಾರೆ.. ಈಗಾಗ್ಲೇ ಮಾಸ್ ಹೀರೊಗಳಿಗೆ ಟಾಂಗ್ ಕೊಡುವಂತೆ ಡೈಲಾಗ್ ಮೂಲಕವೆ ಸದ್ದು ಮಾಡಿದ್ದ ಈ ಸಿನಿಮಾದಲ್ಲಿ ಕೆಜಿಎಫ್ ಚಿತ್ರದಲ್ಲಿನ ಖಡಕ್ ವಿಲನ್ ಕೂಡ ಇದ್ದಾರೆ..

ಅದು ಬೇರೆಯಾರು ಅಲ್ಲ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ಸಹೋದರ ಅಯ್ಯಪ್ಪ.. ಕೆಜಿಎಫ್ ಚಿತ್ರದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿರುವ ಈ ನಟ, ಆರೆಂಜ್ ಸಿನಿಮಾದಲ್ಲಿ ಗಣಿಗೆ ಆಪೋಸಿಟ್ ಆಗಿ ಕಾಣಿಸಿಕೊಳ್ತಿರುವ ವಿಲನ್ ದೇವ್ ಗಿಲ್ ಪಾತ್ರಕ್ಕೆ ವಾಯ್ಸ್ ನೀಡಿದ್ದಾರೆ.. ಈ ವಾಯ್ಸ್ ದೇವ್ ಗಿನ್ ಮ್ಯಾನರಿಸಂಗೆ ತಕ್ಕಂತಿದೆ ಅನ್ನೋದು ನಿರ್ದೇಶಕರ ಮಾತಾಗಿದೆ.. ಇನ್ನೂ ಡಬ್ಬಿಂಗ್ ಸಂದರ್ಭದಲ್ಲಿ ಆರೆಂಜ್ ವೀಕ್ಷಿಸಿರುವ ಅಯ್ಯಪ್ಪ ಇದೊಂದು ಫ್ಯಾಮಿಲಿ ಎಂಟ್ರಟೈನರ್ ಎಂದಿದ್ದಾರೆ..

 

 

Comments

comments

Similar Articles

Top