ರಿಯಲ್ ಲೈಫ್ ನಲ್ಲು ಹೀರೋ ಆದ ಶ್ರೀಮುರುಳಿ.!! ರೋರಿಂಗ್ ಸ್ಟಾರ್ ದೊಡ್ಡ ಗುಣಕ್ಕೆ ಇದೊಂದು ಸಾಕ್ಷಿ ಸಾಕು..!!

ರಿಯಲ್ ಲೈಫ್ ನಲ್ಲು ಹೀರೋ ಆದ ಶ್ರೀಮುರುಳಿ.!! ರೋರಿಂಗ್ ಸ್ಟಾರ್ ದೊಡ್ಡ ಗುಣಕ್ಕೆ ಇದೊಂದು ಸಾಕ್ಷಿ ಸಾಕು..!!

ರೋರಿಂಗ್ ಸ್ಟಾರ್ ಅಂತಾನೇ ಖ್ಯಾತಿ ಗಳಿಸಿರುವ ಶ್ರೀ ಮುರುಳಿ ಎಂದಿಗು ತನಗೆ ಸಿಕ್ಕಿರುವ ಜನಪ್ರಿಯತೆಯನ್ನ ತಲೆಗೆ ಏರಿಸಿಕೊಂಡವರಲ್ಲ ಅನ್ನೋದು ಇಡೀ‌ ಇಂಡಸ್ಟ್ರಿಗೆ ಗೊತ್ತಿದೆ.. ಸಜ್ಜನ ವ್ಯಕ್ತಿತ್ವದ ಮೂಲಕ ಮನೆಮಾತದ ನಟರಲ್ಲಿ‌ ಶ್ರೀಮುರುಳಿ ಸಹ ಒಬ್ಬರು‌.. ಡಾ.ರಾಜ್ ಕುಮಾರ್ ಅವರನ್ನ ನೋಡಿ ಬೆಳೆದ ಶ್ರೀಮುರುಳಿ ಅವರ ಮಕ್ಕಳಂತೆಯೇ‌ ಸಾದ ಸೀದ ಮನುಷ್ಯರಾಗಿದ್ದಾರೆ

ರೀಲ್ ರಾಜಣ್ಣನ ಮಗನಿಗೆ, ರಿಯಲ್ ರಾಜಣ್ಣನ ಮಗ ಸಾಥ್…!!

ಸದ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಾಯಕನಾಗಿ ಹೊಸ ಚಾಪು ಮೂಡಿಸುತ್ತಿರುವ ಈ ರಥಾವರ, ಈಗ ಹೊಸ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಅದು ಸಿನಿಮಾದ ವಿಚಾರಕ್ಕೆ ಅಲ್ಲ ಅನ್ನೋದೆ ಇಲ್ಲಿ ವಿಷ್ಯ.. ಹೌದು, ಶ್ರೀಮುರುಳಿ ವಯಸ್ಸಾದ ಅಜ್ಜಿಯೊಬ್ಬರನ್ನ ಬೀದಿ ಬದಿಯಲ್ಲಿ ಭೇಟಿಯಾಗಿದ್ದಾರೆ

ಸ್ವೀಟಿ ಬರ್ತ್ ಡೇಗೆ ದಮಯಂತಿಯ ಟೈಟಲ್ ಟೀಸರ್ ರಿಲೀಸ್..!!

ಈ ಹಿರಿ ಜೀವದೊಂದಿಗೆ ಮಾತನಾಡುತ್ತಾ ಅವರ ಯೋಗಕ್ಷೇಮ, ಹಿನ್ನೆಲೆ ಎಲ್ಲವನ್ನು ತಿಳಿದುಕೊಂಡ ಶ್ರೀ ಮುರುಳಿ ಆ ಅಜ್ಜಿಯಲ್ಲಿ ತನ್ನ ಅವ್ವನನ್ನ ಕಂಡಿದ್ದಾರೆ.. ಜೊತೆಗೆ ಅವರೊಂದಿಗೆ ತೆಗೆಸಿಕೊಂಡ ಫೋಟೊಗಳನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ..

ದೇಶದ ಶ್ರೀಮಂತರಲ್ಲಿ ಶ್ರೀಮುರುಳಿಗೆ ಎಷ್ಟನೇ ಸ್ಥಾನ ಗೊತ್ತಾ.‌.?

ಜೊತೆಗೆಲೈಫ್ ಅನ್ನೋ ಜರ್ನಿಲಿ, ಹಾಗೆ ಕೆಲವರನ್ನ ನೆನಪುಗಳಿಗಾಗಿ ನಾವು‌ ಮೀಟ್ ಮಾಡ್ತೀವಿ.. ಈ ಸಂದರ್ಭದಲ್ಲಿ ನನ್ನ ರೌಡಿ ಅಜ್ಜಿ ಲಕ್ಷ್ಮವ್ವ ಅವರನ್ನ ತುಂಬಾ ಮಿಸ್ ಮಾಡಿಕೊಳ್ತೀನಿ.. ಈ ಅಜ್ಜಿಯನ್ನ ನೋಡಿ ನಾನು ನನ್ನ ಅವ್ವನನ್ನು ನೆನೆದೆ ಎಂದಿದ್ದಾರೆ

ಶ್ರೀ ಮುರುಳಿ ಅಭಿನಯದ ಭರಾಟೆ ಮೇಕಿಂಗ್ ಟೀಸರ್ ರಿಲೀಸ್ ಆಯ್ತು..! ಹೇಗಿದೆ ಅಂತ ನೀವೆ ನೋಡಿ…

ಈ ಅಜ್ಜಿಯ ಪೂರ್ವಪರ ವಿಚಾರಿಸಿ ಅವರಿಗೆ ಯಾರು ಇಲ್ಲ ಅನ್ನೋದನ್ನ ತಿಳಿದು ಮರುಗಿದ ಶ್ರೀಮುರುಳಿ, ಆನಂತರ ಅವರಿಗೆ ಸಹಾಯ ಮಾಡಲು ಮರೆಯಲಿಲ್ಲ.. ಅಜ್ಜಿಗೆ ಕೆಲ ವಸ್ತುಗಳನ್ನ ಹಾಗೆ ಕಂಬಳಿಯನ್ನ ಕೊಡಿಸಿದ್ದಾರೆ.. ಈ ಮೂಲಕ ಬರೀ ತೆರೆ ಮೇಲೆ ಮಾತ್ರವಲ್ಲ ನಿಜ ಜೀವನದಲ್ಲಿ ಮಾನವೀಯತೆಯನ್ನ ಪ್ರದರ್ಶನ ಮಾಡಿ ರಿಯಲ್ ಹೀರೊ ಆಗಿದ್ದಾರೆ..

ಮದಗಜಗಳ ಶ್ರೀ ಮುರುಳಿ ಮದಗಜ.. ಹೆಬ್ಬುಲಿ ಬಲೆಗೆ ಬಿದ್ದೆ ಬಿಡ್ತು ಒಂಟಿ ಸಲಗ..!!

ಸದ್ಯಕ್ಕೆ ಭರಾಟೆ ಸಿನಿಮಾದಲ್ಲಿ ಬ್ಯೂಸಿ ಇರುವ ರೋರಿಂಗ್ ಸ್ಟಾರ್, ಇದಾದ ಮೇಲೆ ಆಯೋಗ್ಯ ನಿರ್ದೇಶಕ ಮಹೇಶ್, ಹೆಬ್ಬುಲಿ ನಿರ್ಮಾಪಕ ಉಮಾಪತಿ ಅವರ‌ ಕಾಂಬಿನೇಷನ್ನ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ..

ಅಭಿಮಾನಿಗಳ ಬಳಿ ಕಿಚ್ಚ ಇಟ್ರು ಮನವಿ..!! ಇವರನ್ನು ಹುಡುಕಿಕೊಡುವಂತೆ ಕೇಳ್ತಿದ್ದಾರೆ..! ಯಾರನ್ನ ಗೊತ್ತಾ..?

Comments

comments

Similar Articles

Top