ಮೆಲ್ಬರ್ನ್ ನಲ್ಲಿ‌ ಕನ್ನಡ ಡಿಂಡಿಮ ಬಾರಿಸಲು ಹೊರಟ ಗೀತಕ್ಕ-ಶಿವಣ್ಣ..

ಮೆಲ್ಬರ್ನ್ ನಲ್ಲಿ‌ ಕನ್ನಡ ಡಿಂಡಿಮ ಬಾರಿಸಲು ಹೊರಟ ಗೀತಕ್ಕಶಿವಣ್ಣ..

ಕನ್ನಡದ ಕೆಲಸಗಳಿಗೆ ಸದಾ ಸಿದ್ದವಿರುವ ನಟ ಡಾ.ಶಿವರಾಜ್ ಕುಮಾರ್.. ಬಿಡುವಿಲ್ಲದಿದ್ರು ಸಮಯ ಮಾಡಿಕೊಂಡು ಕನ್ನಡಿಗರೊಂದಿಗೆ ಕೈ ಜೋಡಿಸೋದನ್ನ ಎಂದು ಮರೆಯೋದಿಲ್ಲ.. ಹೀಗಾಗೆ ಶಿವಣ್ಣ ತಮ್ಮ ಪತ್ನಿಯೊಂದಿಗೆ ಮೆಲ್ಬರ್ನ್ ಗೆ ಪ್ರಯಾಣ ಬೆಳಸಿದ್ದಾರೆ..

ಕನ್ನಡ‌‌ ಕುವರ ಶಿವಣ್ಣನಿಂದ ಮೆಲ್ಬರ್ನ್ ಕನ್ನಡ ಭವನಕ್ಕೆ ಸಿಗಲಿದೆ ಚಾಲನೆ..

ಹೌದು, ದೂರದ ದೇಶವಾದ ಆಸ್ಟ್ರೇಲಿಯಾ ನೆಲದಲ್ಲಿ ಕನ್ನಡ ಸಂಘವನ್ನ ಕಟ್ಟಿಕೊಂಡ ಸ್ವಾಭಿಮಾನಿ ಕನ್ನಡಿಗರ ಕಾರ್ಯಕ್ರಮಕ್ಕೆ ಶಿವಣ್ಣ ಹೋಗುತ್ತಿರೋದು.. ಮೆಲ್ಬರ್ನ್ ಕನ್ನಡ ಸಂಘ ಇದೇ ನವಂಬರ್ 10 ರಂದು ಸ್ಥಾಪಿಸಲು ಉದ್ದೇಶಿಸಿರುವ ಕನ್ನಡದ ಭವನಕ್ಕೆ ಅದ್ದೂರಿ ಚಾಲನೆ ನೀಡಲ್ಲಿದ್ದಾರೆ ಶಿವಣ್ಣ‌‌..

ಹೀಗಾಗೆ ಈ ಕಾರ್ಯಕ್ರಮದ ಆಯೋಜಕರಾದ ಸಾಯಿ ಅಶೋಕ್ ಸೇರಿದಂತೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಅವರು ಸಹ ಶಿವರಾಜ್ ಕುಮಾರ್ ದಂಪತಿಗಳ ಜೊತೆಗೆ ನಿನ್ನೆ ಮೆಲ್ಬರ್ನ್ ನಗರಕ್ಕೆ ತೆರಳಿದ್ದಾರೆ.. ಇದೇ 10 ನೇ ತಾರೀಖು ಅಂದ್ರೆ ಶನಿವಾರದಂದು ಅಲ್ಲಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಿರುವ ಶಿವಣ್ಣ, ಅಲ್ಲಿನ ಕನ್ನಡಿಗರು ಸೇರಿ ನಿರ್ಮಿಸ್ತಿರೋ ಕನ್ನಡ ಭವನಕ್ಕೆ ಚಾಲನೆ ನೀಡಲ್ಲಿದ್ದಾರೆ

Comments

comments

Similar Articles

Top